ಕಡಬ : ನವೆಂಬರ್ 27 ರಂದು ನಾಪತ್ತೆಯಾಗಿದ್ದ ಬಿಳಿನೆಲೆಯ ಸಂದೀಪ್ ಎಂಬ ಯುವಕನ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾಗಿ ವಾರಗಳ ಬಳಿಕ ಗ್ರಾಮಸ್ಥರ ಒತ್ತಡಕ್ಕೆ ಮಣಿದ ಪೊಲೀಸರು ತನಿಖೆ ಆರಂಭಿಸಿ ಪ್ರಕರಣವನ್ನು ಬೇಧಿಸಿದ್ದಾರೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದ ದೂರು ಸ್ವೀಕರಿಸಲು ಪೊಲೀಸರು ಮುಂದಾಗಿರಲಿಲ್ಲ. ಬಳಿಕ ರಾತೋರಾತ್ರಿ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಶಂಕಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿತ್ತು.
ಕಡಬ ಸುಬ್ರಹ್ಮಣ್ಯ ರಸ್ತೆಯ ನಾರಡ್ಕ ಎಂಬ ಪ್ರದೇಶದಲ್ಲಿ ಸಂದೀಪ್ ಮೃತದೇಹ ಪತ್ತೆಯಾಗಿದೆ. ಸಂದೀಪ್ನನ್ನು ಹತ್ಯೆ ಮಾಡಿದ್ದ ಪ್ರತೀಕ್ ಪೆಟ್ರೋಲ್ ಸುರಿದು ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಎಂಬುದು ಗೊತ್ತಾಗಿದೆ.