Visitors have accessed this post 821 times.

ವಿಟ್ಲ: ವಿದೇಶದಲ್ಲಿರುವ ಮಾಲಿಕನ ಮನೆಗೆ ನುಗ್ಗಿದ ಕಳ್ಳರು

Visitors have accessed this post 821 times.

ವಿಟ್ಲ: ವಿದೇಶದಲ್ಲಿರುವ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಸಿಸಿ ಟಿವಿಯ ಡಿ.ವಿ.ಆರ್ ಹೊತ್ತೊಯ್ದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿಯಲ್ಲಿ ನಡೆದಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಸಮೇತ ಯುಎಇ ಯ ಅಜ್ಮನ್ ನಲ್ಲಿದ್ದು, ಆರು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ರವಿವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಸಂಶಯಗೊಂಡಿದ್ದಾರೆ. ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಎ.ಸಿ.ಚಾಲು ಮಾಡಿಯೇ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಜಾಲಾಡಿರುವುದು ಗಮನಕ್ಕೆ ಬಂದಿದೆ. ಮಾಲಿಕ ಖಲೀಲ್ ಕುಟುಂಬ ವಿದೇಶದಲ್ಲಿರುವ ಕಾರಣ ಅದೃಷ್ಟವಶಾತ್ ಚಿನ್ನಾಭರಣಗಳೆಲ್ಲವೂ ಸುರಕ್ಷಿತವಾಗಿವೆ. ಆದರೆ ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ರ‍್ಯಾಡೋ ವಾಚ್ ಮಾತ್ರ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *