ಮೈದುನ ಜೊತೆಗಿನ ಆಕ್ರಮ ಸಂಬಂಧ ಬಹಿರಂಗವಾಗಿದ್ದಕ್ಕೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ 28 ವರ್ಷದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಆದ್ರೆ, ಮೈದುನ (ಗಂಡನ ಸಹೋದರ) ಜೊತೆಗಿನ ಸಂಬಂಧ ಎಲ್ಲರಿಗೂ ಗೊತ್ತಾಗುತ್ತಿದ್ದಂತೆಯೇ ಆರತಿ ತನ್ನ ಅಕ್ಕನ ಮನಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿಗೆ ಏಳು ವರ್ಷದ ಹಿಂದೆ ಮೊರಬ ಗ್ರಾಮದ ಪ್ರಶಾಂತ್ ಕಾಂಬಳೆ ಜೊತೆಗೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಒಂದು ಗಂಡು ಒಂದು ಹೆಣ್ಣು ಮಗುವಿದ್ದು ಆದರೆ ಅಕ್ಕನ ಮನೆಗೆ ಬಂದಿದ್ದವಳು ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ನಡೆಸಿದಾಗ ಒಂದು ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ ಸ್ಟೇಟಸ್ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಆರತಿ ಸಾವಿಗೆ ಕಾರಣ ಮೊಬೈಲ್ ನಲ್ಲಿಟ್ಟಿದ್ದ ಸ್ಟೇಟಸ್. ಆ ಸ್ಟೇಟಸ್ ನಲ್ಲಿ ಇದ್ದಿದಾದ್ರೂ ಏನು ಎನ್ನುವುದನ್ನು ನೋಡಿದಾಗ ಬೆಳಕಿಗೆ ಬಂದಿದ್ದು ಅದೊಂದು ಸಂಬಂಧ. ಇಲ್ಲಿ ಆರತಿ ಹಾಗೂ ಮೈದುನ (ಗಂಡನ ಸಹೋದರ) ಸಾಗರ್ ಕಾಂಬಳೆ ನಡುವೆ ಕೆಲ ದಿನಗಳಿಂದ ಸಂಬಂಧ ಇತ್ತು. ಆ ವೇಳೆ ಇಬ್ಬರು ಫೋಟೋ ಕೂಡ ತೆಗೆದುಕೊಂಡಿದ್ದರು. ಆದ್ರೆ ಮೈದುನ, ಆರತಿ ಫೋಟೋ ಜೊತೆಗೆ ತನ್ನ ಫೋಟೋ ಸೇರಿಸಿ ಎಡಿಟ್ ಮಾಡಿ ಅದನ್ನ ವಾಟ್ಸಪ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿದ್ದಾನೆ.
ಇದನ್ನು ನೋಡಿದ ಗ್ರಾಮದ ಕೆಲ ಯುವಕರು ಕೂಡಲೇ ಆರತಿ ಗಂಡ ಪ್ರಶಾಂತ್ ಗೆ ತಿಳಿಸಿದ್ದಾರೆ. ಬಳಿಕ ಪ್ರಶಾಂತ್ ಮನೆಗೆ ಹೋಗಿ ಹೆಂಡತಿ ಆರತಿ ಜೊತೆ ಜಗಳ ಮಾಡಿದ್ದಾನೆ. ನಂತರ ಹಿರಿಯರು ಸೇರಿ ಈಕೆಗೆ ಬುದ್ದಿವಾದ ಹೇಳಿ ಅಕ್ಕನ ಮನೆಗೆ ಕಳುಹಿಸಿದ್ದಾರೆ. ಗುಪ್ತವಾಗಿದ್ದ ಸಂಬಂಧ ಹೊರಗೆ ಬಿತ್ತು ಎಂದು ಆರತಿ ಅಕ್ಕನ ಮನೆಗೆ ಬಂದಾಗ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆಯ ಸಾವಿಗೆ ಅವಿವಾಹಿತ ಸಾಗರ್ ಹಾಗೂ ಆತನ ಕುಟುಂಬಸ್ಥರು ಕಾರಣ ಎಂದು ಮಹಿಳೆಯ ಪೋಷಕರು ಆರು ಜನರ ವಿರುದ್ದ ರಾಯಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಆರತಿ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಸಾಗರ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಆದ್ರೆ, ಇತ್ತ ಎರಡು ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿವೆ.