ಮುಜಾಫರ್ನಗರ: ಬಿಹಾರದ ಕಾಲೇಜು ಕ್ಯಾಂಪಸ್‌ನಲ್ಲಿ ಮೂವರು ಪುಂಡರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅವರು ಆ ಯುವಕನನ್ನು ಕೋಲು ಮತ್ತು ಬೆಲ್ಟ್‌ನಿಂದ ಥಳಿಸಿದ್ದಾರೆ. ಅವನ ಕಿವಿಗಳನ್ನು ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಮಾಡಿದ್ದಾರೆ. ಮುಜಾಫರ್‌ಪುರದ ಎಂಎಸ್‌ಕೆಬಿ ಕಾಲೇಜಿನಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಈ ವಿಡಿಯೋ ವೈರಲ್ ಆದ ನಂತರ ಆ ಬಾಲಕನ ಕುಟುಂಬದ ಸದಸ್ಯರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಬಾಲಕನನ್ನು ಹೊಡೆಯುವ ಮೊದಲು ನೆಲದ ಮೇಲೆ ಉಗುಳಿದ ಎಂಜಲು ನೆಕ್ಕುವಂತೆ ಬಲವಂತಪಡಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ನಂತರ ಹಲ್ಲೆಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡಿತ್ತು. ಈ ವಿಡಿಯೋ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ನಗರದ ಬನಾರಸ್ ಬ್ಯಾಂಕ್ ಚೌಕ್ ಪ್ರದೇಶದ ಮೂವರು ಶಂಕಿತರು ಮತ್ತು ಐವರು ಅಪರಿಚಿತ ಹುಡುಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
https://twitter.com/news4nations?ref_src=twsrc%5Etfw%7Ctwcamp%5Etweetembed%7Ctwterm%5E1870329015220965710%7Ctwgr%5E187510701d586c5f959cc0c2ad9549fa86cb5db5%7Ctwcon%5Es1_&ref_url=https%3A%2F%2Fhayathtv.com%2Fnews-26909%2F
ಕುಟುಂಬದವರ ಹೇಳಿಕೆ ಆಧರಿಸಿ ಪೊಲೀಸರು ಎಂಟು ಬಾಲಕರನ್ನು ಆರೋಪಿಗಳೆಂದು ಹೆಸರಿಸಿದ್ದು, ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 16ರಂದು ತನ್ನ ಮಗ ಮನೆಗೆಲಸದ ನಿಮಿತ್ತ ಎಂಎಸ್‌ಕೆಬಿ ಕಾಲೇಜು ಬಳಿ ಹೋಗಿದ್ದ ಎಂದು ಸಂತ್ರಸ್ತೆಯ ತಾಯಿ ಫರ್ಜಾನಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಸಮಯದಲ್ಲಿ ತನ್ನ ಮಗನಿಗೆ ಬಸ್ಕಿ ಹೊಡೆಸಲು ಒತ್ತಾಯಿಸಲಾಯಿತು. ನಂತರ ನೆಲದ ಮೇಲೆ ಉಗುಳಿದ್ದನ್ನು ನೆಕ್ಕಲು ಒತ್ತಾಯಿಸಲಾಯಿತು ಎಂದು ತಾಯಿ ಆರೋಪಿಸಿದ್ದಾರೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಮಗನಿಗೆ 2 ಸಾವಿರ ರೂ. ನೀಡಿದ್ದು, ಹಲ್ಲೆ ವೇಳೆ ಕದ್ದೊಯ್ದಿರುವುದಾಗಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆ ಪ್ರಭಾರಿ ಶರತ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.