ಮಂಗಳೂರು: ಶಟ್ಲ್ ಆಡುವಾಗ ವಿದ್ಯಾರ್ಥಿ ಶಹೀಮ್‌ ಕುಸಿದು ಬಿದ್ದು ಮೃತ್ಯು

ಮಂಗಳೂರು : ವಿದ್ಯಾರ್ಥಿಯೋರ್ವನು ಶಟ್ಲ್ ಆಟವಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅತ್ತಾವರ ಐವರಿ ಟವರ್ ನಿವಾಸಿ ಶಹೀಮ್‌ (20) ಮೃತಪಟ್ಟ ವಿದ್ಯಾರ್ಥಿ. ಶಹೀಮ್ ಮೂಲತಃ ಮಂಗಳೂರು ಹೊರವಲಯದ ಅಡ್ಡೂರಿನ ಶರೀಫ್ ಅವರ ಪುತ್ರ, ಪ್ರಸ್ತುತ ಅತ್ತಾವರ ಐವರಿ ಟವರ್‌ ವಾಸವಿದ್ದಾನೆ.

ಶಹೀಮ್‌ ಎಂದಿನಂತೆ ಸ್ನೇಹಿತರೊಂದಿಗೆ ಫಳ್ನೀರ್‌ನ ಪರ್ಫೆಕ್ಟ್ ಪಾಸ್ ಕೋರ್ಟ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿರುವಾಗ ಕುಸಿದು ಬಿದ್ದಿದ್ದಾನೆ.

ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ಶಹೀಮ್ ಅಲೋಶಿಯಸ್‌ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದು, ಉತ್ತಮ ಕ್ರೀಡಾಪಟುವಾಗಿದ್ದರು‌‌.

Leave a Reply