ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಮೂವರು ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಕನ್ನಾಳ ಕ್ರಾಸ್ ಬಳಿ ಜ.24 ರಂದು ನಡೆದಿದೆ.

ಮೃತರನ್ನು ವಿಜಯಪುರ ನಗರದ ಅಭಿಷೇಕ್ ಸಾವಂತ್ (23), ವಿಜಯಕುಮಾರ್ ಔರಂಗಾಬಾದ್ (24), ರಾಜು ಬಿರಾದಾರ (23) ಎಂದು ಗುರುತಿಸಲಾಗಿದೆ.

ಇನ್ನುಳಿದ ರಾಜು ಕಾಂಬಳೆ ಮತ್ತು ಪೋಳ ಎಂಬುವರು ಗಾಯಗೊಂಡಿದ್ದಾರೆ.ಈ ಐವರು ಕಾರಿನಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದರು. ಅಲ್ಲಿಂದ ಮರಳಿ ಬರುವಾಗ ಈ ಘಟನೆ ಸಂಭವಿಸಿದೆ.

Leave a Reply