ಮುಂದಿನ 2-3 ವರ್ಷದಲ್ಲಿ ಮೋದಿಯನ್ನ ಕೊಲ್ತೇವೆ’ : ಪ್ರಧಾನಿಗೆ ಬೆದರಿಕೆ

ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿರುವ ಆಂದೋಲನದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ರೈತರ ಆಕ್ರೋಶವು ಮುನ್ನೆಲೆಗೆ ಬಂದಿದೆ. ಪ್ರಧಾನಿಗೆ ಬೆದರಿಕೆ ಹಾಕುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಅವರು ಪಂಜಾಬ್ಗೆ ಕಾಲಿಟ್ಟಾಗ ಅವರಿಗೆ ಪಾಠ ಕಲಿಸಲಾಗುವುದು ಎಂದು ಇತ್ತಿಚಿಗಷ್ಟೇ ಒಬ್ಬ ರೈತ ಹೇಳಿದ್ದ.

ಈಗ, ಬೆದರಿಕೆಯ ಮಟ್ಟವು ಸ್ವಲ್ಪ ಹೆಚ್ಚಾಗಿದೆ. ಮುಂದಿನ 2-3 ವರ್ಷಗಳಲ್ಲಿ ಪ್ರಧಾನಿ ಮೋದಿಯವರನ್ನ ಕೊಲ್ಲಲಾಗುವುದು ಎಂದು ರೈತರು ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ಹೊಸ ವೀಡಿಯೊ ಹೊರಬಂದಿದೆ.

“ಮುಂದಿನ ಎರಡು ಮೂರು ವರ್ಷಗಳಲ್ಲಿ ನೀವು ಮೋದಿಜಿ ಹತ್ಯೆಯಾದ ಸುದ್ದಿಯನ್ನ ಕೇಳುತ್ತೀರಿ ಎಂದು ಪ್ರತಿಭಟನಾಕಾರರೊಬ್ಬರು ಹೇಳುತ್ತಿರುವುದು ಕೇಳಿಸುತ್ತದೆ. ವೀಡಿಯೊದ ಸತ್ಯಾಸತ್ಯತೆಯನ್ನ ಇನ್ನೂ ಕಂಡುಹಿಡಿಯಲಾಗಿಲ್ಲ. ಆದ್ರೆ, ದೇಶದ ಪ್ರಧಾನಿ ವಿರುದ್ಧ ಬೆದರಿಕೆಗಳು ಬರುತ್ತಿರುವ ನಾಚಿಕೆಗೇಡಿತನ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಅಸಮಾಧಾನಗೊಂಡಿದ್ದಾರೆ.

Leave a Reply