ಮಂಗಳೂರು: ಫೆ.27ರಿಂದ ಮಾ.3ರ ವರೆಗೆ ವಿಧಾನ ಸೌಧದ ಆವರಣದಲ್ಲಿ ಬುಕ್, ಕಲ್ಚರಲ್, ಫುಡ್ ಫೆಸ್ಟಿವಲ್

ಮಂಗಳೂರು: ಫೆ.27ರಿಂದ ಮಾ.3ರ ವರೆಗೆ ವಿಧಾನ ಸೌಧದ ಆವರಣದಲ್ಲಿ ಮೊತ್ತ ಮೊದಲ ಬಾರಿಗೆ ಬುಕ್, ಕಲ್ಚರಲ್, ಫುಡ್ ಫೆಸ್ಟಿವಲ್ ನಡೆಯಲಿದೆ ಎಂದು ವಿಧಾನ ಸಭೆ ಸಭಾಧ್ಯಕ್ಷ ಯುಟಿ ಖಾದರ್ ಅವರು ತಿಳಿಸಿದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮವೊಂದು ವಿಧಾನಸೌಧದಲ್ಲಿ ನಡೆಯುತ್ತಿದ್ದು, ಇದು ಬರಹರಾಗಾರನ್ನು ವಿಧಾನ ಸೌಧದ ಬಳಿ ತರುವ ಪ್ರಯತ್ನವಾಗಿದೆ. ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯ ಮೂಲಕ ಬರಹಗಾರಿಗೆ ಅವಕಾಶ ನೀಡಲಾಗುತ್ತದೆ.

ವಿಧಾನ ಸೌಧದ ಸುತ್ತ 150 ಕ್ಕೂ ಅಧಿಕ ಸ್ಟಾಲ್ಸ್ ಬರಲಿದೆ. ಫೆಸ್ಟಿವಲ್ ನಲ್ಲಿ 80 ಪ್ರತಿಶತ ಕನ್ನಡ ಪುಸ್ತಕ, 20 ಪ್ರತಿಶತ ಇತರೆ ಪುಸ್ತಕಗಳು ಇರಲಿದೆ. ಶಾಸಕರ ನಿಧಿಯಿಂದ 2 ರಿಂದ 3 ಲಕ್ಷದ ಹಣದಿಂದ ಪುಸ್ತಕ ಖರೀದಿಗೆ ಅವಕಾಶ ನೀಡಲಾಗಿದ್ದು, ಅದನ್ನು ತಮ್ಮ ಕ್ಷೇತ್ರದ ಶಾಲಾ ಕಾಲೇಜುಗಳಿಗೆ ನೀಡಲು ಅವಕಾಶವಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಖಾದರ್ ಮಾಹಿತಿ ನೀಡಿದರು.

Leave a Reply