ಚಾಮರಾಜನಗರ : ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಚಲಾಯಿಸಿದ ಶಿಕ್ಷಕನನ್ನು ಇದೀಗ ಅಮಾನತುಗೊಳಿಸಲಾಗಿದೆ. ಗೊಂಬಳ್ಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ವೀರಭದ್ರಸ್ವಾಮಿಯನ್ನು ಸಸ್ಪೆಂಡ್ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ವೀರಭದ್ರಸ್ವಾಮಿ ಚಾಲಕನ ಬದಲು ತಾವೇ ಬಸ್ ಚಲಾಯಿಸಿದ್ದರು.
ಶಿಕ್ಷಕ ವೀರಭದ್ರ ಸ್ವಾಮಿ ಶಾಲಾ ಬಸ್ ಚಲಾಯಿಸುವ ವಿಡಿಯೋ ಸಹ ವೈರಲ್ ಆಗಿತ್ತು.ಸಾರ್ವಜನಿಕರ ದೂರಿನ ಮೇರೆಗೆ ಶಿಕ್ಷಕ ವೀರಭದ್ರ ಸ್ವಾಮಿಯನ್ನು ಇದೀಗ ಅಮಾನತು ಮಾಡಲಾಗಿದೆ. ಉಲ್ಲಂಘನೆ ಆರೋಪದ ಅಡಿ ವೀರಭದ್ರ ಸ್ವಾಮಿಯನ್ನು ಅಮಾನತುಗೊಳಿಸಿ ಡಿಡಿಪಿಐ ರಾಮಚಂದ್ರರಾಜೆ ಅರಸ್ ಆದೇಶ ಹೊರಡಿಸಿದ್ದಾರೆ.