Visitors have accessed this post 54 times.

ಹಾಸನ ಪೆನ್ ಡ್ರೈವ್ ಕೇಸ್: ನಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮುಗಿಸುವ ಹುನ್ನಾರ: ಎಚ್‌ಡಿಕೆ ಆರೋಪ

Visitors have accessed this post 54 times.

ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ನಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮುಗಿಸುವ ಹುನ್ನಾರ ನಡೆದಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದರು. ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು, ಪ್ರಕರಣವನ್ನ ಜೀವಂತವಾಗಿ ಇಡಬೇಕು ಎಂದು ಹೊರತು ಪಡಿಸಿ, ಇವರಿಗೆ ಪ್ರಕಾರಣದಲ್ಲಿರುವಂತಹ ಸತ್ಯಂಶ ವಾಸ್ತಾಂಶ ಹೊರತರಬೇಕು ಎಂದು ಅನ್ನಿಸುತ್ತಿಲ್ಲ ಎಂದು ಆರೋಪಿಸಿದರು.ಸತ್ಯಾಂಶ ಹೊರತರುವ ಉದ್ದೇಶ ಮುಖ್ಯಮಂತ್ರಿ ಸೇರಿದಂತೆ ಯಾರಿಗೂ ಇಲ್ಲ. ದೇವರಾಜೇಗೌಡರನ್ನೇ ಮುಖ್ಯಮಂತ್ರಿಗಳು ಪ್ರಶ್ನೆ ಮಾಡ್ತಾರೆ. ಹಾಗಾಗಿ ನಾನು ಒಂದು ಪ್ರಶ್ನೆ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಮಗ ವಿದೇಶಕ್ಕೆ ಹೊದ್ರಲ್ಲ, ವಿದೇಶಕ್ಕೆ ಹೊದಾಗ ದುರ್ಘಟನೆ ನಡೀತು ಅಲ್ವಾ ಯಾವ ಕಾರ್ಯಕ್ರಮಕ್ಕೆ ಹೊಗಿದ್ರು? ಎಂದು ಪ್ರಶ್ನಿಸಿದರು.

ಪರ್ಮಿಷನ್ ತಗೆದುಕೊಂಡಿದ್ರಾ..? ಇವರ ಮಗನ ಜೊತೆ ಯಾರ್ ಯಾರ್ ಹೋಗಿದ್ರು ಎಷ್ಟು ಜನ ಇದ್ರು. ಅಲ್ಲಿ ನಡೆದಂತ ಘಟನೆ ಬಗ್ಗೆ ತೆನಿಖೆ ಯಾಕೆ ಮಾಡಲಿಲ್ಲ? ಯಾಕೆ ಮುಚ್ಚಿಟ್ಟರು? ಹಾಗಿದ್ರೆ ಅನುಮತಿ ಕೊಟ್ಟು ಇವರೇ ಕಳಿಸಿದ್ರಾ..? ಬೆಳೆದಂತಹಾ ಮಕ್ಕಳು ಪ್ರತಿಯೊಂದು ವಿಚಾರವನ್ನ ತಂದೆ ತಾಯಿಯನ್ನು ಕೇಳಿ ಮಾಡ್ತಾರಾ? ಎಂದು ಪ್ರಶ್ನಿಸಿದರು.ಪೆನ್ ಡ್ರೈ ಸೂತ್ರದಾರಿ ಇದ್ದಾರಲ್ಲ ಮಾರುಕಟ್ಟೆಗೆ ಬಿಟ್ಟರಲ್ವಾ, ಯಾವನ್ನಾದ್ರು ಅರೆಸ್ಟ್ ಮಾಡಿದ್ರಾ ಇಲ್ಲಿಯವರೆಗೂ? ನಾನು ಗೃಹ ಸಚಿವರನ್ನೂ ಕೇಳ್ತೀನಿ ಮುಖ್ಯಮಂತ್ರಿಗಳನ್ನೂ ಕೇಳ್ತೀನಿ, ವಿಚಾರಣೆ ನಡೆಯುವಾಗ ಯಾರೇ ತಪ್ಪು ಇದ್ರು ಅವರಿಗೆ ಶಿಕ್ಷೆಯಾಗಬೇಕು ಎಂದು ಡೇ ಒನ್ ನಿಂದ ಹೇಳ್ತಾ ಬಂದಿದ್ದೇನೆ. ಅವರಲ್ಲೇ ಹೇಳ್ತಿದ್ದರು ಪೆನ್ ಡ್ರೈವ್ ಸರ್ಕ್ಯೂಲೆಷನ್ ಮಾಡಿದವರು ಅಪರಾಧವಲ್ಲ ಅಂತೆ ಎಂದರು.

Leave a Reply

Your email address will not be published. Required fields are marked *