
ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ವ್ಯಕ್ತಿಯೊಬ್ಬರನ್ನು ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿ, ಶವವನ್ನು ಕೊಂಡೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರು ಕಣ್ಣೀರು ಹಾಕುತ್ತಲೇ ಆಸ್ಪತ್ರೆಯಿಂದ ಊರಿಗೆ ಕರೆದೊಯ್ಯುವಾಗ ಡಾಬಾ ಬಂತು ನೋಡು ಊಟ ಮಾಡ್ತೀಯ ಎಂದಿದ್ದೇ ತಡ ವ್ಯಕ್ತಿ ಊಸಿರಾಡಿದಂತ ವಿಚಿತ್ರ ಘಟನೆ ನಡೆದಿದೆ.



ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಬಂಕಾಪುರದಲ್ಲೇ ಇಂತದ್ದೊಂದು ವಿಚಿತ್ರ ಘಟನೆ ನಡೆದಿರೋದು. ಬಂಕಾಪುರದ ಬಿಷ್ಟಪ್ಪ ಗುಡಿಮನಿ(45) ಅವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಟಿಸಿ, ಊರಿಗೆ ಶವ ಕೊಂಡೊಯ್ಯುವಂತೆ ಸೂಚಿಸಿದ್ದರು.
ವೈದ್ಯರ ಸೂಚನೆಯಿಂದ ಬಂಕಾಪುರ ಗ್ರಾಮಕ್ಕೆ ಮೃತ ಬಿಷ್ಟಪ್ಪ ಗುಡಿಮನಿಯ ಶವವನ್ನು ಕರೆ ತರುತ್ತಿದ್ದಂತ ವೇಳೆಯಲ್ಲಿ ಕುಟುಂಬಸ್ಥರು ಡಾಬಾ ಬಂತು ನೋಡು, ಊಟ ಮಾಡುತ್ತೀಯಾ ಅಂತ ಕಣ್ಣೀರಿಡುತ್ತಲೇ ಕೇಳಿದ್ದಾರೆ. ಈ ವೇಳೆಯಲ್ಲಿ ಮೃತ ಬಿಷ್ಟಪ್ಪ ಗುಡಿಮನಿ ಉಸಿರಾಡಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರೇ ಕಕ್ಕಾಬಿಕ್ಕಿಯಾಗಿದ್ದಾರೆ.
ಕೂಡಲೇ ಬಿಷ್ಟಪ್ಪ ಗುಡಿಮನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿಕೊಂಡು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಅತ್ತ ಬಿಷ್ಟಪ್ಪ ಗುಡಿಮನಿ ಸಾವನ್ನಪ್ಪಿದ್ದಾಗಿ ಊರಿನಲ್ಲಿ ಬ್ಯಾನರ್ ಹಾಕಿದ್ದವರು ಕೂಡ ಸತ್ತು, ಬದುಕಿದಂತ ವಿಚಾರ ಕೇಳಿ ಶಾಕ್ ಆಗಿದ್ದಾರೆ.