
ಬೆಂಗಳೂರು: ರಂಜಾನ್ ಮಾಸದಲ್ಲಿ ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರಿಗೆ ಬೇಗನೆ ಕೆಲಸ ಬಿಡಲು ಅವಕಾಶ ನೀಡಬೇಕು ಎಂದು ಕರ್ನಾಟಕ ಕಾಂಗ್ರೆಸ್ ಉಪಾಧ್ಯಕ್ಷರಾದ ವೈ.ಸೈಯದ್ ಅಹ್ಮದ್ ಮತ್ತು ಎ.ಆರ್.ಎಂ.ಹುಸೇನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ



ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ ಗಾಗಿ ಒಂದು ಗಂಟೆ ಮುಂಚಿತವಾಗಿ ಕೆಲಸ ಬಿಡಲು ಅವಕಾಶ ನೀಡಿವೆ ಎಂದು ಅವರ ಅರ್ಜಿಯಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಸಿಬ್ಬಂದಿ ತಮ್ಮ ಉಪವಾಸವನ್ನು (ಇಫ್ತಾರ್) ಮುರಿಯಲು ಸಂಜೆ 4 ಗಂಟೆಗೆ ಕೆಲಸವನ್ನು ಬಿಡಲು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಅವರು ಸಿಎಂ ಅವರನ್ನು ಒತ್ತಾಯಿಸಿದರು.