ಪಡುಬಿದ್ರಿ : ಬಡಾ ಗ್ರಾಮದ 21 ವರ್ಷದ ಯುವತಿಯ ಇನ್ಸ್ಟಾ ಗ್ರಾಂ ಖಾತೆಗೆ ಬಡಾ ಗ್ರಾಮದ ನಿವಾಸಿ ಆಸಿಫ್ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿ ಆಕೆಯನ್ನು ತನ್ನೊಂದಿಗೆ ಬರಹೇಳಿದ್ದಲ್ಲದೆ ಮಾ. 7ರಂದು ಕಾರಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೈಯಲ್ಲಿ ಚಾಕು ಹಿಡಿದುಕೊಂಡು ಯುವತಿಯ ಕೈಹಿಡಿದೆಳೆದು ಆಕೆಯ ಮೊಬೈಲನ್ನು ಕಸಿದು ನೆಲಕ್ಕೆಸೆದು ಒಡೆದುಹಾಕಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಯನ್ನು ಮನೆ ಎದುರಿನ ಬಯಲಲ್ಲಿ ನಿಂತು ನೋಡುತ್ತಿದ್ದ ನಾಜಿಮ್ ಅವರ ಬಳಿಗೆ ತೆರಳಿದ ಆರೋಪಿ ಆಸಿಫ್ ಅವರನ್ನು ಬೆದರಿಸಿದ್ದ. ಆಗ ಆತನ ಕೈಯಲ್ಲಿದ್ದ ಚೂರಿಯನ್ನು ನಾಜಿಮ್ ಕಸಿದುಕೊಳ್ಳಲು ಯತ್ನಿಸಿದ್ದು, ಆಸೀಫ್‌ನ ಹಣೆಯ ಬಳಿ ಗಾಯವಾಗಿದೆ. ಅದೇ ವೇಳೆಗೆ ಆತನ ತಮ್ಮ ಆರಿಫ್ ಅಲ್ಲಿಗೆ ಓಡಿ ಬಂದು ಆಯಿಷಾ ಮತ್ತು ಅವರ ಇಬ್ಬರು ತಮ್ಮಂದಿರಿಗೆ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪ್ರತಿದೂರು ಕೂಡ ದಾಖಲಾಗಿದೆ.