
ಸುಳ್ಯ: ಸುಳ್ಯ ಮೂಲದ ಯುವಕನೋರ್ವ ಬ್ಯಾಂಕಾಕ್ ನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಸುಳ್ಯದ ಪಂಬೆತ್ತಾಡಿಯ ನಿವೃತ್ತ ಯೋಧ ದಿ. ಶಿವರಾಮ ಗೌಡರ ಪುತ್ರ ಇಪ್ಪತ್ತಾರು ವರ್ಷದ ಲಿಖಿನ್ ಮೃತ ದುರ್ದೈವಿಯಾಗಿದ್ದಾನೆ.



ಈಜಿಪ್ಟ್ ನ ಶಿಪ್ ನಲ್ಲಿ ಉದ್ಯೋಗಕ್ಕೆ ನೇಮಕಗೊಂಡು ಅಲ್ಲಿಗೆ ತೆರಳಲು ವಿಮಾನ ಪ್ರಯಾಣಕ್ಕಾಗಿ ಬ್ಯಾಂಕಾಕ್ ನಲ್ಲಿ ಒಂದು ರೂಂ ಬುಕ್ ಮಾಡಿಕೊಂಡಿದ್ದರು. ಆದರೆ ಅದೇ ದಿನ ರಾತ್ರಿ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದಾನೆ.
ಈತನ ಸಾವಿಗೆ ಅನೇಕ ಅನುಮಾನಗಳು ವ್ಯಕ್ತವಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ತಾಯಿ ಮತ್ತು ಸಹೋದರರನ್ನು ಅಗಲಿದ್ದು ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.