August 19, 2025
WhatsApp Image 2025-08-18 at 5.04.01 PM

ಪುತ್ತೂರು : ಹಂಟ್ಯಾರ್ ಶಾಲಾ ಬಳಿ ಸಾರ್ವಜನಿಕರ ಹಲವಾರು ವರ್ಷದ ಬೇಡಿಕೆಯಾದ ಪ್ರಯಾಣಿಕರ ಬಸ್ಸು ತಂಗುದಾಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ನಿರ್ಮಿಸಿ ಉದ್ಘಾಟನೆ ಮಾಡಲಾಯಿತು. ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ಅಧ್ಯಕ್ಷರಾದ ಝಖರಿಯಾ ಸಂಟ್ಯಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬುರವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆಗೈದರು. ನಂತರ ಮಾತನಾಡಿದ ಅವರು ಎಸ್.ಡಿ.ಪಿ.ಐ ಯಾವತ್ತೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮುಂಚೂಣಿಯಲ್ಲಿದೆ, ಸರಕಾರಗಳು, ಇಲಾಖೆಗಳು ಜನರಿಗೆ ಬೇಕಾದ ಸೌಲಭ್ಯಗಳು ನೀಡದಂತಹ ಸಂದರ್ಭಗಳಲ್ಲಿ ಎಸ್.ಡಿ.ಪಿ.ಐ ಅದಕ್ಕಾಗಿ ಹೋರಾಟ ನಡೆಸುತ್ತದೆ ಅಲ್ಲಿಯೂ ನ್ಯಾಯ ದೊರಕದೆ ಇದ್ದಲ್ಲಿ ತಾವೇ ಆ ಸೌಲಭ್ಯಗಳನ್ನು ಜನರಿಗೆ ದೊರಕಿಸಿ ಕೊಡುವ ಮೂಲಕ ಪ್ರತಿಭಟನಾ ಶೈಲಿಯನ್ನೇ ಬದಲಾಯಿಸುತ್ತೆ ಎಂದರು. ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು ರವರು ಮಾತನಾಡಿ ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ವತಿಯಿಂದ ಶ್ರಮದಾನಗಳು, ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣಾ ಶಿಬಿರಗಳು ಹೀಗೆ ಹಲವಾರು ಸಮಾಜಮುಖಿಯಾದ ಕೆಲಸಕಾರ್ಯಗಳನ್ನು ನಡೆಸುತ್ತಲೇ ಬಂದಿದೆ ಇಂದು ಅದಕ್ಕೆ ಈ ತಂಗುದಾಣವು ಸೇರಿದೆ, ಈ ಬ್ರಾಂಚ್ ಇಂದು ಪುತ್ತೂರು ತಾಲೂಕಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಹಂಟ್ಯಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಬಾಬು ಮರಿಕೆರವರು ಮಾತನಾಡಿ ಎಸ್.ಡಿ.ಪಿ.ಐ ಇಲ್ಲಿನ ನಾಗರಿಕರ ಸಮಸ್ಯೆಯನ್ನು ಮನಗಂಡು ಈ ತಂಗುದಾಣವನ್ನು ಸ್ವತಃ ದೇಣಿಗೆ ಸಂಗ್ರಹಿಸಿ ಬಹಳ ಅತ್ಯುತ್ತಮವಾಗಿ ನಿರ್ಮಿಸಿದ್ದು ಶ್ಲಾಘನೀಯ, ಇಂತಹ ಸಮಾಜಮುಖಿ ಕೆಲಸ ಕಾರ್ಯಗಳಿಗೆ ನಾವು ಯಾವತ್ತೂ ನಿಮ್ಮೊಂದಿಗಿದ್ದೇವೆ ಎಂದು ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ಗೆ ಅಭಿನಂದಿಸಿದರು. ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕರವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಕಾರ್ಯದರ್ಶಿಯಾದ ಹಮೀದ್ ಕಲ್ಲರ್ಪೆಯವರು, ಉದ್ಯಮಿಗಳಾದ ಸಿ.ಎಮ್ ಇಬ್ರಾಹಿಂ ಮುಸ್ಲಿಯಾರ್ ರವರು ಮಾತನಾಡಿ ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ನ ಈ ಕೆಲಸಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ, ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ವಾಗ್ಲೆ, ಕಾರ್ಯದರ್ಶಿ ಮಸೂದ್ ಸಂಟ್ಯಾರ್ , ಮಾಯ್ ದೆ ದೇವುಸ್ ಚರ್ಚ್ ಸಂಟ್ಯಾರ್ ವಾರ್ಡ್ ಮಾಜಿ ಗುರಿಕ್ಕಾರರಾದ ಸುನಿಲ್ ಡಿಸೋಝ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ, ರಶೀದಾ ಕಲ್ಲರ್ಪೆ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಪರ್ಪುಂಜ, ಬದ್ರಿಯಾ ಗಲ್ಫ್ ಫ್ರೆಂಡ್ಸ್ ಸಂಟ್ಯಾರ್ ಉಪಾಧ್ಯಕ್ಷರಾದ ಬಶೀರ್ ಮರಿಕೆ, ಉದ್ಯಮಿಗಳಾದ ಮಹಮ್ಮದ್ ಕಲ್ಲರ್ಪೆ ಉಪಸ್ಥಿತರಿದ್ದರು. ಎಸ್.ಡಿ.ಪಿ.ಐ ಸಂಟ್ಯಾರ್ ಬ್ರಾಂಚ್ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ, ಸಮದ್ ಝೆನಿತ್ ರವರು ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply