August 30, 2025
WhatsApp Image 2023-09-14 at 8.38.11 AM

ಕೊಲಂಬೊ: ಏಷ್ಯಾಕಪ್ ಸೂಪರ್ -4 ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಗಳಿಸಿದ ಭಾರತ ಫೈನಲ್ ತಲುಪಿದೆ.

ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 41 ರನ್ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟ ಮೊದಲ ತಂಡವಾಗಿದೆ.

ಕಳೆದು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ ಮಂಗಳವಾರದ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೀಲಂಕಾ ಸ್ಪಿನ್ನರ್ ಗಳ ದಾಳಿಗೆ ತತ್ತರಿಸಿ 49.1 ವರ್ಷಗಳಲ್ಲಿ 213 ರನ್ ಗೆ ಆಲ್ ಔಟ್ ಆಯಿತು. ರೋಹಿತ್ ಶರ್ಮಾ 53, ಇಶಾನ್ ಕಿಶನ್ 33, ಕೆಎಲ್ ರಾಹುಲ್ 39 ರನ್ ಗಳಿಸಿದರು. ಲಂಕಾ ಪರ ದುನಿತ್ ವೆಲ್ಲಿಗೆ 5, ಚರಿತ್ ಅಸಲಂಕ 4 ವಿಕೆಟ್ ಪಡೆದರು.

ಸುಲಭದ ಗುರಿ ಬೆನ್ನತ್ತಿದ ಶ್ರೀಲಂಕಾ 41.3 ಓವರ್ ಗಳಲ್ಲಿ 172 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಧನಂಜಯ ಡಿಸಿಲ್ವ 41, ದುನಿತ್ ವೆಲ್ಲಿಗೆ 42 ರನ್ ಗಳಿಸಿದರು. ಭಾರತದ ಪರ ಕುಲದೀಪ್ ಯಾದವ್ 4, ರವೀಂದ್ರ ಜಡೇಜ 2, ಬೂಮ್ರಾ 2 ವಿಕೆಟ್ ಪಡೆದರು.

About The Author

Leave a Reply