Visitors have accessed this post 6 times.
ಮಳೆಯ ಅಬ್ಬರದಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಸೂಪರ್ ಫೋರ್ ನ 3 ನೇ ಪಂದ್ಯ ನಿನ್ನೆ ಮುಕ್ತಾಯವಾಗಿದೆ. ಭಾರತ ತಂಡ 228 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ.
ಕನ್ನಡಿಗ ಕೆ ಎಲ್ ರಾಹುಲ್ ನಿನ್ನೆ ಶತಕ ಬಾರಿಸುವ ಮೂಲಕ ತಮ್ಮ ಹಳೆಯ ಫಾರ್ಮ್ ಗೆ ಮರಳಿದ್ದಾರೆ. ಕೆ ಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ ಅನ್ನು ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಭಾರತ ತಂಡ ಇಂದು ಮತ್ತೊಮ್ಮೆ ಕಣಕ್ಕಿಳಿಯಬೇಕಾಗಿದೆ. ಇಂದು ಕೊಲಂಬೋದಲ್ಲಿ ನಡೆಯಲಿರುವ ಸೂಪರ್ ಫೋರ್ ನ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಮುಖಿಯಾಗಲಿದೆ.
ಫೈನಲ್ ಪ್ರವೇಶಿಸಲು ನಾಲ್ಕು ತಂಡಗಳು ಸೆಣಸಾಡುತ್ತಿದ್ದು, ಇಂದು ಭಾರತಕ್ಕೆ ಗೆಲುವು ತುಂಬಾ ಮುಖ್ಯವಾಗಿದೆ. ಇದಾದ ಬಳಿಕ ಭಾರತ ತಂಡ ಸೆಪ್ಟೆಂಬರ್ 15ರಂದು ಬಾಂಗ್ಲಾ ತಂಡವನ್ನು ಎದುರಿಸಲಿದೆ, ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಬೇಕೆಂಬುದು ಕ್ರಿಕೆಟ್ ಪ್ರೇಮಿಗಳ ಆಸೆಯಾಗಿದೆ.