Visitors have accessed this post 363 times.

ಸುಳ್ಯ : ಸೀರೆ ಸಿಲುಕಿ ಬೈಕ್‌ನಿಂದ ಬಿದ್ದ ಮಹಿಳೆ-ಗಂಭೀರ ಗಾಯ

Visitors have accessed this post 363 times.

ಸುಳ್ಯ : ಬೈಕಿನಲ್ಲಿ ಹಿಂಬದಿ ಸವಾರೆಯಾಗಿದ್ದ ಮಹಿಳೆಯ ಸೀರೆ ಬೈಕಿನ ಚಕ್ರಕ್ಕೆ ಸುತ್ತಿಕೊಂಡ ಪರಿಣಾಮ ಮಹಿಳೆ ಬೈಕ್‌ ನಿಂದ ಬಿದ್ದು ಕಾಲಿಗೆ ತೀವ್ರವಾಗಿ ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಸಂಭವಿಸಿದೆ. ಕೌಡಿಚ್ಚಾರಿನ ಶಾಂಭವಿ ಎಂಬವರು ಬೈಕಿನಲ್ಲಿ ಹಿಂಬದಿ ಕುಳಿತು ಸುಳ್ಯಕ್ಕೆ ಬರುತ್ತಿದ್ದ ವೇಳೆ ಸೀರೆಯ ಸೆರಗು ಬೈಕಿನ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅಪಘಾತ ಸಂಭವಿಸಿದ್ದು, ರಸ್ತೆಗೆ ಬಿದ್ದ ಮಹಿಳೆಯ ಕಾಲಿಗೆ ಗಾಯವಾಗಿದೆ. ಮಹಿಳೆಯನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *