ಕಾಸರಗೋಡು : ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 20 ಲಕ್ಷ ರೂ. ವಶಕ್ಕೆ ಓರ್ವನ ಬಂಧನ

ಮಂಗಳೂರು : ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ಸುಮಾರು 20 ಲಕ್ಷ ರೂ. ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದ ಕಾಸರಗೋಡು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಗರದಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ 20 ಲಕ್ಷ ರೂ. ಕರೆನ್ಸಿ, ಐದು ಲಕ್ಷ ರೂ. ಮುಖ ಬೆಲೆಯ ಅಮೆರಿಕನ್ ಡಾಲರ್ ಹಾಗೂ ದಿರ್‌ಹಂ ಪತ್ತೆಯಾಗಿದೆ. ಎರಿಯಾಲ್ ನಿವಾಸಿ ಮುಸ್ತಫ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply