ಬೆಳ್ತಂಗಡಿ : ಕುವೆಟ್ಟು ಗ್ರಾಮದ ಸುಣ್ಣದಕೆರೆ – ಶಕ್ತಿನಗರ ಸಂಪರ್ಕ ರಸ್ತೆಯು ತೀವ್ರ ಹದೆಗಟ್ಟಿದ್ದು, ದುರಂತವೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಈ ರಸ್ತೆ ಮರುಡಾಮರೀಕರಣ ಆಗಲೇ ಇಲ್ಲ. ಇದರ ಬಗ್ಗೆ ಎಸ್ ಡಿ ಪಿ ಐ ಬೆಂಬಲಿತ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫಾ ಜಿ ಕೆ, ರಿಯಾಝ್ ಮದ್ದಡ್ಕ ರವರು ಮಂಗಳೂರಿನಲ್ಲಿರುವ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಆದಷ್ಟು ಬೇಗ ತಾವು ಈ ರಸ್ತೆ ದುರಸ್ಥಿಯ ಬಗ್ಗೆ ಮಧ್ಯಸ್ಥಿಕೆ ವಹಿಸಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ರಸ್ತೆ ದುರಸ್ಥಿ ಮಾಡಿಸಿಕೊಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಎಸ್ ಡಿ ಪಿ ಐ ಮುಖಂಡರಾದ ನಿಸಾರ್ ಕುದ್ರಡ್ಕ, ದಾವೂದ್ ಜಿ ಕೆ ಉಪಸ್ಥಿತರಿದ್ದರು.