ಮಂಗಳೂರು: ಬೈಂದೂರು ಹೆಂಡತಿಯನ್ನು ಪ್ರಶ್ನಿಸುತ್ತಿದ್ದ ವೇಳೆ ಅನ್ಯಕೋಮಿನ ಯುವಕನಿಂದ ಹಲ್ಲೆ ಎಂಬ ಆರೋಪದ ಸುಳ್ಳು ಸುದ್ದಿ ಇದೀಗಾಗಲೇ ಒಂದು ವೆಬ್ ಸೈಟ್ ಮೂಲಕ ಹರಿದಾಡುತ್ತಿದೆ ನಿಜವಾಗಿಯೂ ಈ ರೀತಿಯ ಯಾವುದೇ ವಿಚಾರವು ನಡೆದಿಲ್ಲ ಅವು ಕೇವಲ ನಿರಾದಾರ ಆರೋಪವಷ್ಟೆ ನಮ್ಮ ಮೇಲೆ ಹಲ್ಲೆ ನಡೆಸಲು ಬಂದಿರುವ ಅಳಿಯ ಸುರೇಶ್ ಭಟ್ ಹಾಗೂ ಆತನ ಬಾವಾ ರಾಮ್ ಪ್ರಸಾದ್ ಭಟ್ ಅವರ ವಿರುದ್ಧ ಇದೀಗಾಗಲೇ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಶಿವಕುಮಾರಿಯವರು ತಿಳಿಸಿದ್ದು..ನಾವು ಸಿರಾಜುದ್ದೀನ್ ಎಂಬವರನ್ನು ಕಾರು ಚಾಲಕರಾಗಿ ಕರೆದಿದ್ದು ಅವರು ಬೈಂದೂರಿಗೆ ಬಂದು ನಾನು ಹಾಗೂ ನನ್ನ ಮಗ ಗಿರೀಶ್ ಹಾಗೂ ಮಗಳು ಪ್ರತಿಮಾ ರವರು ಸಿರಾಜುದ್ದೀನ್ ರವರೊಂದಿಗೆ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಳಿಯ ಸುರೇಶ್ ಭಟ್ ಹಾಗೂ ಆತನ ಬಾವಾ ರಾಮ್ ಪ್ರಸಾದ್ ಭಟ್ ಎಂಬವರು ಏಕಾಏಕಿ ಕಾರನ್ನು ಅಡ್ಡಗಟ್ಟಿ ತನಗೆ ತನ್ನ ಮಗಳಿಗೆ ಹಾಗೂ ಕಾರು ಚಾಲಕರಾಗಿ ಬಂದ ಸಿರಾಜುದ್ದೀನ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸಿರಾಜುದ್ದೀನ್ ರವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಸುರೇಶ್ ಭಟ್ ಅವರ ಅತ್ತೆ ಶಿವಕುಮಾರಿಯವರು ತಿಳಿಸಿದ್ದಾರೆ.. ಇದೀಗ ಸುರೇಶ್ ಭಟ್ ಅವರು ಸಿರಾಜುದ್ದೀನ್ ಹಾಗೂ ನಮ್ಮ ಮೇಲೆ ನಿರಾದಾರದ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೆಬ್ ಸೈಟ್ ಪತ್ರಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಶಿವಕುಮಾರಿಯವರು ತಿಳಿಸಿದ್ದಾರೆ