ಉಪ್ಪಿನಂಗಡಿ :ಇತ್ತೀಚಿನ ದಿನಗಳಲ್ಲಿ ಯುವಜನರು ಹೃದಯಾಘಾತದಿಂದ ನಿಧನರಾಗುತ್ತಿರುವ ಪ್ರಕರಣ ಏರಿಕೆಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇಲ್ಲದ ರೀತಿಯಲ್ಲಿ ಕುಸಿದು ಬಿದ್ದು ಸಾವನಪ್ಪುತ್ತಿದ್ದಾರೆ.
ಇದೇ ರೀತಿಯ ಪ್ರಕರಣವೊಂದು ಉಪ್ಪಿನಂಗಡಿಯಲ್ಲಿ ವರದಿಯಾಗಿದ್ದು, ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಮೇ 3ರಂದು ನಿಧನ ರಾಗಿದ್ದಾರೆ.
ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಇದ್ದುದ್ದರಿಂದ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದು ನೋಡಿದಾಗ ಇವರು ಮಲಗಿದ್ದಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ.