ಉಳ್ಳಾಲ : ಶಾಲೆಯ ಆವರಣಗೋಡೆ ಕುಸಿದು ವಿಧ್ಯಾರ್ಥಿನಿ ಶಾಜಿಯಾ ಮೃತ್ಯು..!

ಉಳ್ಳಾಲ : ಶಾಲೆಯ ಆವರಣಗೋಡೆ ಕುಸಿದ ಪರಿಣಾಮ ಶಾಲೆಯ ವಿಧ್ಯಾರ್ಥಿನಿಯೊಬ್ಬಳು ಸಾವನಪ್ಪಿದ ಘಟನೆ ಹರೇಕಳದ ನ್ಯೂಪಡ್ಪು ಶಾಲೆಯಲ್ಲಿ ನಡೆದಿದೆ. ಮೃತರನ್ನು ನ್ಯೂಪಡ್ಪು ನಿವಾಸಿ ಸಿದ್ದೀಕ್‌– ಜಮೀಲಾ ದಂಪತಿಯ ಪುತ್ರಿ ಶಾಜಿಯಾ (7) ಎಂದು ಗುರುತಿಸಲಾಗಿದೆ.

ಈ ಶಾಲೆಯಲ್ಲಿ ಮುಡಿಪು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಶಿಬಿರ ನಡೆಯುತ್ತಿತ್ತು. ನ್ಯೂಪಡ್ಪು ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಜಿಯಾ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದಳು. ಬಾಲಕಿಯು ಗೇಟಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಆವರಣ ಗೋಡೆಯು ಆಕೆಯ ಮೇಲೆ ಕುಸಿದು ಬಿದ್ದಿತ್ತು. ಮಳೆಯಿಂದಾಗಿ ಆವರಣಗೋಡೆ ಒದ್ದೆಯಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ದುರ್ಘಟನೆ ಸಂಭವಿಸಿದ ಸ್ಥಳದಲ್ಲಿ ಜನ ಗುಂಪುಗೂಡಿದ್ದರು.

Leave a Reply