Visitors have accessed this post 261 times.

ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ (ರಿ) ಇದರ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ

Visitors have accessed this post 261 times.

ಕನ್ಯಾನ ಹಾಲು ಉತ್ಪಾದಕರ ಸಹಕಾರ ಸಂಘ (ರಿ) ಕನ್ಯಾನ ಇದರ 2022- 23ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಸಂಘದ ” ಕ್ಷೀರ ಸೌಧ ಸಹಕಾರ ಸಭಾಭವನದಲ್ಲಿ ಅಧ್ಯಕ್ಷರಾದ ಶ್ರೀ ಯಂ ಗಣಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಕನ್ಯಾನ ಪಬ್ಲಿಕ್ ಸ್ಕೋಲಿನ ವಿದ್ಯಾರ್ಥಿಯರು ಪ್ರಾರ್ಥಿ ಸಿದರು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ . ಶ್ರೀ ರಾಧಾಕೃಷ್ಣ.ಕೆ ವಾರ್ಷಿಕ ವರದಿ ವಾಚಿಸಿದರು.ದ ಕ ಹಾಲು ಒಕ್ಕೂಟದ ವಿಸ್ತರಣಾಧಿ ಕಾರಿಗಳಾದ ಶ್ರೀಮತಿ ವಿದ್ಯಾ ಮಾಹಿತಿ ನೀಡಿದರು. ಸಭೆಯಲ್ಲಿ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SSLC ಯಲ್ಲಿ ಕು| ರಕ್ಷಿತ, PUC ಯಲ್ಲಿ ಕು| ಸ್ಮಿತ ಹೆಚ್ಚು ಅಂಕ ಗಳಿಸಿದ್ದು ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸಲಾಯಿತು. ಸಭಾಧ್ಯಕ್ಷರು ಮಾತನಾಡಿ ಸಂಘವು ವರದಿ ಸಾಲಿನಲ್ಲಿ ರೂ.3,91,206-53 ನಿವ್ವಳ ಲಾಭ ಗಳಿಸಿದ್ದು ಆಡಿಟ್ ವರ್ಗೀಕರಣ “ಎ” ದರ್ಜೆ ಪಡೆದಿದೆ ಈ ಎಲ್ಲಾ ಬೆಳವಣಿಗೆಗೆ ಕಾರಣರಾದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಮತ್ತು ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ಸದಸ್ಯರ ಪ್ರತಿ ಲೀ ಹಾಲಿಗೆ ರೂ 0.73 ಪೈಸೆ ಬೋನಸ್‌ ಶೇ 20 ಡಿವಿಡೆಂಡ್ ನೀಡಲಾಗುವುದು ಎಂದರು. ಉಪಾಧ್ಯಕ್ಷರಾದ ಶ್ರೀ ಯಸ್ ಬಿ ಕಣಿಯೂರು. ಎಲ್ಲಾ ಸದಸ್ಯರು, ವಿಸ್ತರಣಾಧಿಕಾರಿಗಳು, ನಿರ್ದೇಶಕರು, ಸಿಬ್ಬಂದಿ ವರ್ಗದವರಿಗೂ ದನ್ಯವಾದವಿತ್ತರು. ಸಹಾಯಕಿ ಶ್ರೀಮತಿ ಹರಿಣಿಯಂ ಸಹಕರಿಸಿದರು.

Leave a Reply

Your email address will not be published. Required fields are marked *