Visitors have accessed this post 423 times.
ಶಿವಮೊಗ್ಗ: ನಿನ್ನೆ ರಾಗಿಗುಡ್ಡಕ್ಕೆ ಪುತ್ತೂರು ಮೂಲದ ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ್ದರು. ಸಂತ್ರಸ್ತರನ್ನು ಭೇಟಿಯಾಗಿ ಮಾತನಾಡಿದ್ದರು. ಈ ವೇಳೆಯಲ್ಲಿ ಆಯುಧ ಪೂಜೆ ಸಂದರ್ಭದಲ್ಲಿ ತಲ್ವಾರ್ ಪೂಜೆ ಮಾಡಿ ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ.
ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆ ಮೇಲೆ ಕಲ್ಲು ತೂರಾಟದ ನಂತ್ರ ನಡೆದಂತ ಘಟನೆಯಿಂದ ಹಲವರು ಗಾಯಗೊಂಡಿದ್ದರು. ಅವರನ್ನು ನಿನ್ನೆ ಬಿಜೆಪಿಯ ತಂಡ ಭೇಟಿ ಮಾಡಿ, ಸಾಂತ್ವಾನ ಹೇಳಿತ್ತು. ಈ ಘಟನೆ ಸಂಬಂಧ ನಿನ್ನೆ ಪುತ್ತೂರುನಿಂದ ಅರುಣ್ ಪುತ್ತಿಲ ಕೂಡ ಆಗಮಿಸಿ, ಸಂತ್ರಸ್ತರನ್ನು ಭೇಟಿ ಮಾಡಿದ್ದರು.
ಗಲಾಟೆಯಲ್ಲಿ ಏಟು ತಿಂದು ಸಂತ್ರಸ್ತರಾಗಿದ್ದವರನ್ನು ಭೇಟಿ ಮಾಡಿದಂತ ವೇಳೆಯಲ್ಲಿ ಅರುಣ್ ಪುತ್ತಿಲ ನೀವು ಆಯುಧ ಪೂಜೆ ಸಂದರ್ಭದಲ್ಲಿ ತಲ್ವಾರ್ ಪೂಜೆ ಮಾಡಿ ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ನಿಷೇಧಾಜ್ಞೆಯ ನಡುವೆಯೂ ಪ್ರಚೋದನಾತ್ಮಕ ಹೇಳಿಕೆ ನೀಡಿದಂತ ಅವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿದ್ದಾರೆ.