Visitors have accessed this post 642 times.
ಸೂರತ್ :ಗುಜರಾತಿನ ಸೂರತ್‌ನ ಶಾಲೆಯೊಂದರಿಂದ ಶಿಕ್ಷಕರೊಬ್ಬರು ಶಿಶುವಿಹಾರದ ವಿದ್ಯಾರ್ಥಿನಿಯೊಬ್ಬಳ ಬೆನ್ನು ಮತ್ತು ಕೆನ್ನೆಗೆ 35 ಬಾರಿ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ಘಟನೆಯ ವಿಡಿಯೋ ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ವೀಡಿಯೊದಲ್ಲಿ, ಶಿಕ್ಷಕಿ ವಿದ್ಯಾರ್ಥಿನಿಯನ್ನು ಯಾವುದೋ ವಿಷಯಕ್ಕೆ ತಳ್ಳುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಸೂರತ್‌ನ ಸಾಧನಾ ನಿಕೇತನ ಶಾಲೆಯಲ್ಲಿ ಈ ಘಟನೆ ನಡೆದಿದೆ