Visitors have accessed this post 220 times.

ಮಂಗಳೂರು: ಓದದೆ ಸರಕಾರ ವ್ಯಕ್ತಿತ್ವ ವಿಕಸನ ಸಂಬಂಧಿ ಎನ್ಇಪಿ ಪಠ್ಯ ಕಿತ್ತೆಸೆಯುವುದು ದುರಾದೃಷ್ಟಕರ – ಕ್ಯಾ‌.ಗಣೇಶ್ ಕಾರ್ಣಿಕ್

Visitors have accessed this post 220 times.

ಮಂಗಳೂರು: ಕನಿಷ್ಠ ಎನ್ಇಪಿಯ ಕರಡುಪ್ರತಿಯನ್ನು ಓದದೆ ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನ ಸಂಬಂಧಿಸಿದ ಪಠ್ಯವನ್ನು ಕಿತ್ತೆಸೆಯುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಹೇಳುತ್ತಿದೆ. ಆ ಪಠ್ಯದಲ್ಲಿ ಒಂದು ಶಬ್ದ ಆಕ್ಷೇಪಾರ್ಹ ಎನಿಸಿದ್ದಲ್ಲಿ ನಾವು ಯಾರೂ ಆ ಬಗ್ಗೆ ಮಾತನಾಡುವುದಿಲ್ಲ ಎಂದು ರಾಜ್ಯ ಬಿಜೆಪಿ ವಕ್ತಾರ ಕ್ಯಾ‌.ಗಣೇಶ್ ಕಾರ್ಣಿಕ್ ಸವಾಲೆಸೆದರು.

ನಗರದಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯಕ್ಕೆ ಕಲ್ಲು ಹಾಕುವ ಬೇಜವಾಬ್ದಾರಿ ವರ್ತನೆ ಯಾವ ರಾಜಕೀಯ ಪಕ್ಷವೂ ಮಾಡಬಾರದು. ಎನ್ಇಪಿ ಪಠ್ಯ ಸಂವಿಧಾನ ವಿರೋಧಿ ಎಂಬ ರಾಜಕೀಯ ಕಾರಣದ ಹೇಳಿಕೆ ನೀಡುವುದು ಮೂರ್ಖತನ. ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಬರೆದಿರುವುದು, ವೀರ ಸಾವರ್ಕರ್ ಪಠ್ಯವೆನ್ನುವ ಕಾರಣಕ್ಕೆ ಪಠ್ಯವನ್ನು ಕಿತ್ತೆಸೆಯುತ್ತೇವೆ ಎನ್ನುವುದು ಸರಿಯಲ್ಲ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಚಪ್ಪಡಿಕಲ್ಲು ಹಾಕುವ ಪ್ರಯತ್ನ ಬೇಡ ಎಂದು ಆಗ್ರಹಿಸಿದರು.

ನಾನು ಪ್ರಾಮಾಣಿಕವಾಗಿ ಹೇಳುವುದೇನೆಂದರೆ ಸಿಎಂ ಸಿದ್ದರಾಮಯ್ಯ ಆಗಲಿ, ಇಂದಿನ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಾಗಲಿ, ಸಚಿವ ಡಿ.ಸುಧಾಕರ್ ಅವರಾಗಲೀ ಎನ್ಇಪಿಯ ಪುಸ್ತಕವನ್ನು ಖಂಡಿತವಾಗಿಯೂ ಓದಿಲ್ಲ. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಅವರಿಗೆ ಈ ಪುಸ್ತಕವನ್ನು ನೀಡಿ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿತ್ತು. ಆದರೆ ಅವರು ಓದುವ ಪಯತ್ನ ಮಾಡಲಿಲ್ಲ. ಈ ಪುಸ್ತಕದಲ್ಲಿ ಎನ್ಇಪಿಯನ್ನು ರಾಜ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆ ಮಾಡುವ ಅವಕಾಶ ನೀಡಲಾಗಿದೆ. ಜೊತೆಗೆ ರಾಜ್ಯಕ್ಕೆ ಹಿತವಾಗುವ ಪಾಲಿಸಿ ತರಲು ಅವಕಾಶ ನೀಡಲಾಗಿತ್ತು‌. ಆದರೆ ಎನ್ಇಪಿಯಲ್ಲಿಯೇ ಎಸ್ಇಪಿ ಮಾಡುವ ಅವಕಾಶ ಇದೆ ಎಂಬುದು ಅವರಿಗೆ ಗೊತ್ತೇ ಇಲ್ಲ. ಎನ್ಇಪಿ ವಿದ್ಯಾರ್ಥಿಗಳಲ್ಲಿ ಸ್ವಭಾವ ಸಹಜವಾದ ಪ್ರಶ್ನಿಸುವ, ಸೃಜನಶೀಲತೆ, ಕುತೂಹಲ, ಆವಿಷ್ಕಾರ ಇದನ್ನು ಉಳಿಸಿಕೊಂಡು ಎರಡನೇ ಹಂತದಲ್ಲಿ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡು ಬೆಳೆಯಲು ಅವಕಾಶ ನೀಡುತ್ತದೆ. ಆದರೆ ಇವರು ಓದದಿದ್ದರಿಂದ ಇದಾವೂದು ಅವರಿಗೆ ತಿಳಿದಿಲ್ಲ ಎಂದು ಗಣೇಶ್ ಕಾರ್ಣಿಕ್ ಹೇಳಿದರು.

Leave a Reply

Your email address will not be published. Required fields are marked *