Visitors have accessed this post 203 times.
ವಿಟ್ಲ : ಕನ್ಯಾನ ನಿವಾಸಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಸಂಘಟಕ, ಕನ್ಯಾನ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎನ್.ಕೆ.ಈಶ್ವರ ಭಟ್ ನೀರ್ಪಾಜೆ(84) ಅವರು ಅಸೌಖ್ಯದಿಂದ ಅ.12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಗೀತಾರತ್ನಾ, ಪುತ್ರ ಎನ್.ಕೆ.ರಾಜಶಂಕರ್ ನೀರ್ಪಾಜೆ, ಮತ್ತು ಇಬ್ಬರು ಪುತ್ರಿಯರಾದ ಜಯಶ್ರೀ ಮತ್ತು ಶೋಭಾ ಅವರನ್ನು ಅಗಲಿದ್ದಾರೆ.
ವಿದ್ವಾಂಸ ದಿ.ನೀರ್ಪಾಜೆ ಭೀಮ ಭಟ್ ಅವರ ಸಹೋದರ ಈಶ್ವರ ಭಟ್ ಅವರು ಹಿಂದಿ ವಿಶಾರದ, ಸಂಸ್ಕೃತ ಭಾಷೆ ಅಭ್ಯಸಿಸಿದ್ದರು. ಕನ್ಯಾನ ಗ್ರಾ.ಪಂ.ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ಯಾನ ಸರಕಾರಿ ಪಪೂ. ಕಾಲೇಜು, ಕನ್ಯಾನ, ಬಂಡಿತ್ತಡ್ಕ ಶಾಲಾಭಿವೃದ್ದಿ ಸಮಿತಿಯಲ್ಲಿ ಮತ್ತು ಕನ್ಯಾನ ಪ್ರಾಥಮಿಕ ಶಾಲೆ ಹಳೆ ವಿದ್ಯಾರ್ಥಿ ಸಂಘದಲ್ಲಿ ಶ್ರಮಿಸಿದ್ದಾರೆ. ಕನ್ಯಾನ ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ಕನ್ಯಾನ ಯಕ್ಷಗಾನ ಸಂಘ ಮತ್ತು ಯುವಕ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಹವ್ಯಾಸಿ ಕಲಾವಿದರಾಗಿದ್ದ ಅವರು ತಾಳಮದ್ದಳೆ ಅರ್ಥಧಾರಿಯಾಗಿ, ಪಾತ್ರಧಾರಿಯಾಗಿದ್ದುಕೊಂಡು ಸ್ವತಃ ಸಂಘಟಿಸುತ್ತಿದ್ದರು.