Visitors have accessed this post 1039 times.
ಮಂಗಳೂರು: ಅನಾಥ ರೋಗಿಗಳಿಗೆ ಸಹಾಯ ಮಾಡುತ್ತಿದ್ದ ಮುಲ್ಕಿ ನಿವಾಸಿ ಆಪತ್ಥಾಂಧವ ಎಂದೇ ಗುರುತಿಸಲ್ಪಟ್ಟಿದ್ದ ಆಸಿಫ್ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬ್ಬಂದಿಗೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ಬಂಧಿಸಿದ್ದಾರೆ. ಆಸಿಫ್ ಬುಧವಾರ ಸಂಜೆ ವೆಸ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು ಎನ್ನಲಾಗಿದೆ. ಈ ಸಂದರ್ಭ ಸೆಕ್ಯುರಿಟಿ ಗಾರ್ಡ್ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದಾಗ ತಾನು ರೋಗಿಗಳನ್ನು ಅಡ್ಮಿಷನ್ ಮಾಡಿಸುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ. ಆದರೆ ಕೆಲವು ಹೊತ್ತಿನ ಬಳಿಕವೂ ಆ್ಯಂಬುಲೆನ್ಸ್ ತೆರವು ಮಾಡದಿದ್ದಾಗ ಮಹಿಳಾ ಸಿಬ್ಬಂದಿ ಆಕ್ಷೇಪಿಸಿದರು. ಈ ಸಂದರ್ಭ ಆಸಿಫ್ ಮತ್ತು ಮಹಿಳಾ ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತನ್ನನ್ನು ದೂಡಿ ಹಾಕಿ ಆಸಿಫ್ ಹಲ್ಲೆ ಮಾಡಿದ್ದಾರೆ ಎಂದು ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಆಸಿಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.