ಮಂಗಳೂರು : ಎಚ್ಚರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸ್‌ ಕಣ್ಣಾವಲು

ಮಂಗಳೂರು : ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಕಾವು ಏರತೊಡಗಿದ್ದು, ಭಾರತದಲ್ಲೇ ನಡೆಯುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಳಿಸಿದೆ. ಈ ಕ್ರಿಕೆಟ್ ಪಂದ್ಯಾವಳಿ ಬೆಟ್ಟಿಂಗ್ ದಂಧೆಕೋರರಿಗೂ ಹೊಸ ಅವಕಾಶ ತೆರೆದಿಟ್ಟಿದ್ದು, ಈ ಜಾಲವನ್ನು ಬೇಧಿಸುವ ನಿಟ್ಟಿನಲ್ಲಿ ಪೊಲೀಸರು ಈಗಾಗಲೇ ರೂಪರೇಖೆ ಸಿದ್ಧಪಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಐಪಿಎಲ್ ಸಂದರ್ಭ ನಗರದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬೆಟ್ಟಿಂಗ್ ದಂಧೆಕೋರರು ಸಕ್ರಿಯರಾಗುತ್ತಿದ್ದರು. ಆದರೆ ಕಳೆದ ಬಾರಿ ವಿಶ್ವಕಪ್ ಕ್ರಿಕೆಟ್‌ ಪಂದ್ಯಾವಳಿ ಸಂದರ್ಭದಲ್ಲೂ ಬೆಟ್ಟಿಂಗ್ ದಂಧೆ ಸದ್ದು ಮಾಡಿದೆ. ಪೊಲೀಸ್ ಇಲಾಖೆಗೂ ಇದೊಂದು ದೊಡ್ಡ ಸವಾಲಾಗಿದೆ. ವಿಶ್ವಕಪ್ ಮುಗಿದ ಕೆಲವೇ ತಿಂಗಳಲ್ಲಿ ಐಪಿಎಲ್ ಕೂಡ ಆರಂಭವಾಗುವುದರಿಂದ ಇನ್ನಷ್ಟು ನಿಗಾವಹಿಸುವುದು ಅಗತ್ಯ.ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಮುನ್ನವೇ ಬೆಟ್ಟಿಂಗ್ ಜಾಲ ನಿಗ್ರಹಕ್ಕೆ ಸಂಬಂಧಿಸಿದಂತೆ ಸಭೆನಡೆಸಿರುವ ಮಂಗಳೂರು ಪೊಲೀಸ್ ಆಯುಕ್ತರು ಎಲ್ಲ ಠಾಣಾಧಿಕಾರಿಗಳಿಗೆ ಈ ಸಂಬಂಧ ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.

Leave a Reply