Visitors have accessed this post 624 times.

ಬಂಟ್ವಾಳದಲ್ಲಿ ಪೋಲೀಸ್ ಪಥ ಸಂಚಲನ; ಸಹಾಯಕ್ಕೆ ಬಂದ CRPF ಪಡೆ..!

Visitors have accessed this post 624 times.

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ವಿವಿಧ ಕಡೆ ನವರಾತ್ರಿ ಆಚರಣೆ ಹಾಗೂ ಶಾರದಾ ಪೂಜಾ ಮಹೋತ್ಸವ ಆರಂಭವಾಗಿದೆ.

ಅನೇಕ ದಿನ ಈ ಕಾರ್ಯಕ್ರಮ ನಡೆಯಲಿರುವ ಕಾರಣ ಭದ್ರತಾ ದೃಷ್ಟಿಯಿಂದ ಪೋಲೀಸರ ಜೊತೆ ಸಿ‌‌.ಆರ್‌‌.ಎಫ್. ಪೋಲೀಸರ ತಂಡ ನಿಯೋಜನೆ ಆಗಿದೆ.

ಅ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಲೀಸ್ ಪಥ ಸಂಚಲನ ನಡೆಯಿತು.

ಕೈಕಂಬ ಮಿತ್ತಬೈಲು ಮಸೀದಿ ಬಳಿಯಿಂದ ಬಿಸಿರೋಡಿನ ಸರ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥಸಂಚಲನ ನಡೆಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ನಗರ ಪೋಲಿಸ್ ಠಾಣಾ ಪೋಲಿಸ್ ಇನ್ಸ್ ಪೆಕ್ಟರ್ ಅನಂತಪದ್ಮನಾಭ, ಎಸ್.ಐ.ರಾಮಕೃಷ್ಣ, ಸಹಾಯಕ ಕಮಾಂಡರ್ ಪ್ರದೀಪ್ ಹಾಗೂ ಠಾಣೆಯ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಥಸಂಚಲನದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *