Visitors have accessed this post 613 times.

ಸರ್ಕಾರಿ ಕೆಲಸ, ಆಸ್ತಿಯ ಆಸೆಗೆ ತಂಗಿಯರಿಗೇ ವಿಷವಿಟ್ಟು ಕೊಂದ ಅಣ್ಣ!

Visitors have accessed this post 613 times.

ಹಣ ಹಾಗೂ ಆಸ್ತಿ ಕುಟುಂಬ ಸದಸ್ಯರನ್ನೇ ಶತ್ರುಗಳನ್ನಾಗಿ ಮಾಡುತ್ತದೆ. ಹಣ ಹಾಗೂ ಆಸ್ತಿಯ ಆಸೆಗೆ ಬಿದ್ದವರು ತಮ್ಮ ಕುಟುಂಬ ಸದಸ್ಯರನ್ನೇ ಕೊಲ್ಲೋದಕ್ಕೆ ಹೇಸೋದಿಲ. ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ಗಣೇಶ್ ಮೋಹಿತೆ ಎಂಬಾತನೇ ಈ ಪ್ರಕರಣದ ಪ್ರಮುಖ ಆರೋಪಿ. ಈತನ ತಂದೆ 2009ರಲ್ಲಿ ನಿಧನ ಹೊಂದಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗ. ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಣೇಶ್ ಮೋಹಿತೆ ಅವರ ತಂದೆ ನಿಧನ ಹೊಂದಿದ ಬಳಿಕ ಆ ಕೆಲಸ ಗಣೇಶ್ ಮೋಹಿತೆಗೆ ಸಿಕ್ಕಿತ್ತು. ಸರ್ಕಾರಿ ಕೆಲಸ ಪಡೆಯುವ ವೇಳೆ ಗಣೇಶ್ ಮೋಹಿತೆ ತನ್ನ ಇಬ್ಬರು ಸಹೋದರಿಯನ್ನು ಹಾಗೂ ತಾಯಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ.್ಲ. ಇಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ.ಆದರೆ 2021ರಲ್ಲಿ ತಂದೆಯ ಸರ್ಕಾರಿ ಕೆಲಸ ಸಿಕ್ಕ ಬಳಿಕ ಗಣೇಶ್ ಮೋಹಿತೆ ಬದಲಾಗಿದ್ದ! ತಂದೆ ಮೃತಪಟ್ಟ ಬಳಿಕ ಸಿಕ್ಕ ಪಿಎಫ್‌ ಹಣ ಗಣೇಶ್ ಮೋಹಿತೆಯ ತಾಯಿ ಜಯಮಾಲಾ ಅವರ ಖಾತೆಯಲ್ಲಿ ಇತ್ತು. ತಾಯಿಯ ಸಹಿಯನ್ನು ನಕಲು ಮಾಡಿದ್ದ ಗಣೇಶ್ ಮೋಹಿತೆ, ಆಕೆಯ ಖಾತೆಯಲ್ಲಿ ಇದ್ದ ಹಣವನ್ನೆಲ್ಲಾ ಲಪಟಾಯಿಸಿದ್ದ. ಆದರೆ, ತಂದೆಯ ಕೆಲಸವನ್ನು ತಾನು ಗಿಟ್ಟಿಸಿಕೊಳ್ಳುವ ವೇಳೆ ನೀಡಿದ್ದ ಭರವಸೆಯಂತೆ ಸ್ವಂತ ಮನೆಯನ್ನು ಸಹೋದರಿಯರ ಹೆಸರಿಗೆ ಬರೆದಿದ್ದ. ಆದರೆ, ಆ ಮನೆಯನ್ನೂ ತನ್ನ ಹೆಸರಿಗೇ ಮಾಡಿಕೊಳ್ಳಬೇಕು ಎಂದು ಹವಣಿಸುತ್ತಿದ್ದ ಗಣೇಶ್ ಮೋಹಿತೆ ಇದಕ್ಕಾಗಿ ದೊಡ್ಡ ಷಡ್ಯಂತ್ರವನ್ನೇ ಮಾಡಿದ!

ಸಹೋದರಿಯರ ಕೊಲೆಗೆ ಇಂಟರ್‌ನೆಟ್‌ನಲ್ಲಿ ಹುಡುಕಾಟ!

ತನ್ನ ಸಹೋದರಿಯನ್ನು ಹೇಗಾದರೂ ಮುಗಿಸಬೇಕು, ತನ್ನ ತಾಯಿಯನ್ನೂ ಕೊಲೆ ಮಾಡಬೇಕು ಎಂದು ನಿರ್ಧರಿಸಿದ್ದ ಗಣೇಶ್ ಮೋಹಿತೆ ಇದಕ್ಕಾಗಿ ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ. ವಿಷಕಾರಿ ವಸ್ತುಗಳ ಕುರಿತಾಗಿ ಸುಮಾರು 53 ಬಾರಿ ಗಣೇಶ್ ಮೋಹಿತೆ ಹುಡುಕಾಟ ನಡೆಸಿದ್ದ.ಅಕ್ಟೋಬರ್ 15 ರಂದು ಗಣೇಶ್ ಮೋಹಿತೆಯ ಸಹೋದರಿ ಸೋನಾಲಿ ಮೋಹಿತೆ ಹಾಗೂ ಸ್ನೇಹಾ ಮೋಹಿತೆ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಬದುಕುಳಿಯಲಿಲ್ಲ. ಅಕ್ಟೋಬರ್ 16 ರಂದು ಮೃತಪಟ್ಟ ಇಬ್ಬರೂ ಸಹೋದರಿಯರು ಸೇವಿಸಿದ್ದ ಆಹಾರದಲ್ಲಿ ವಿಷ ಬೆರೆಸಲಾಗಿತ್ತು ಅನ್ನೋ ವಿಚಾರ ಮರಣೋತ್ತರ ಪರೀಕ್ಷೆ ವೇಳೆ ಬಯಲಾಯ್ತು.

ಕೂಡಲೇ ತಡ ಮಾಡದ ಪೊಲೀಸರು ಗಣೇಶ್ ಮೋಹಿತೆ ಹಾಗೂ ತಾಯಿ ಜಯಮಾಲಾರನ್ನು ವಿಚಾರಣೆಗೆ ಒಳಪಡಿಸಿದರು. ಆಗ ಪೊಲೀಸರಿಗೆ ಸತ್ಯಾಂಶ ಗೊತ್ತಾಯ್ತು. ಆರೋಪಿ ಗಣೇಶ್ ಮೋಹಿತೆ ತನ್ನ ತಾಯಿಯನ್ನೂ ಹತ್ಯೆ ಮಾಡಲು ಬಯಸಿದ್ದ. ಆದರೆ, ವಿಷ ಬೆರೆಸಿದ್ದ ಆಹಾರವನ್ನು ಆಕೆ ಸೇವನೆ ಮಾಡಿರಲಿಲ್ಲ. ಆರಂಭದಲ್ಲಿ ಪೊಲೀಸರಿಗೆ ಸತ್ಯ ಬಾಯ್ಬಿಡದ ಗಣೇಶ್ ಮೋಹಿತೆ ನಂತರ ವಿಚಾರಣೆ ತೀವ್ರಗೊಳಿಸಿದಾಗ ಬಾಯಿ ಬಿಟ್ಟ.

ತನ್ನ ತಾಯಿಯ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ತಾಯಿ ಕೋಪಗೊಂಡಿದ್ದಳು. ಸರ್ಕಾರಿ ಕೆಲಸವನ್ನು ಸಹೋದರಿಗೆ ಕೊಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡೋದಾಗಿ ಬೆದರಿಕೆ ಒಡ್ಡಿದ್ದಳು. ಜೊತೆಗೆ ಸ್ವಂತ ಮನೆ ಕೂಡಾ ಸಹೋದರಿಯರ ಹೆಸರಿನಲ್ಲಿತ್ತು. ಹೀಗಾಗಿ, ಕೊಲೆಗೆ ಸಂಚು ರೂಪಿಸಿದೆ ಎಂದು ಬಾಯ್ಬಿಟ್ಟಿದ್ದಾನೆ. ಇನ್ನು ಗಣೇಶ್‌ ಮೋಹಿತೆಯ ಕಾರನ್ನು ಪರಿಶೀಲನೆ ನಡೆಸಿದ ವೇಳೆ ಇಲಿ ಪಾಷಾಣದ ಕವರ್‌ಗಳು ಕೂಡಾ ಪೊಲೀಸರಿಗೆ ಸಿಕ್ಕಿದೆ.

ಆರೋಪಿ ಗಣೇಶ್ ಮೋಹಿತೆ ಸೂಪ್‌ನಲ್ಲಿ ಇಲಿ ಪಾಷಾಣ ಬೆರೆಸಿ ಎಲ್ಲರಿಗೂ ಕೊಟ್ಟಿದ್ದ ಅನ್ನೋ ಸಂಗತಿ ಬಯಲಾಗಿದೆ. ಒಟ್ಟಿನಲ್ಲಿ ಸಹೋದರನ ಧನದಾಹಕ್ಕೆ ಆತನ ಇಬ್ಬರು ತಂಗಿಯರು ಜೀವ ಬಿಟ್ಟಿದ್ಧಾರೆ.

Leave a Reply

Your email address will not be published. Required fields are marked *