ನವದೆಹಲಿ : ಪೇಜಾವರ ಶ್ರೀಗಳಿಗೆ 60 ವರ್ಷ ತುಂಬಿದ ಹಿನ್ನೆಲೆ ಪ್ರಸನ್ನಾಭಿನಂದನ ಕಾರ್ಯಕ್ರಮವನ್ನ ದೆಹಲಿ ಪೇಜಾವರ ಮಠ ಹಮ್ಮಿಕೊಂಡಿತ್ತು. ಈ ವೇಳೆ ಶ್ರೀಗಳ ತುಲಾಭಾರದ ವೇಳೆ ಹಗ್ಗ ತುಂಡಾಗಿದ್ದು, ತಲೆ ಮೇಲೆ ತಕ್ಕಡಿ ಸರಳು ಬಿದ್ದಿದೆ.
ಶ್ರೀಗಳು ದೆಹಲಿಯ ಪೇಜಾವರ ಮಠಕ್ಕೆ ಭೇಟಿದ ನೀಡಿದ ವೇಳೆ ನಡೆದ ಘಟನೆ ನಡೆದಿದ್ದು, ದೆಹಲಿಯಲ್ಲಿ ಭಕ್ತರ ಸಮ್ಮುಖದಲ್ಲಿ ತುಲಾಭಾರ ನಡೆಯುತ್ತಿತ್ತು.
ಈ ವೇಳೆ ಏಕಾಏಕಿ ತಲೆ ಮೇಲೆ ತಕ್ಕಡಿ ಸರಳು ಬಿದ್ದದ್ದು, ತರಚಿದ ಗಾಯದೊಂದಿಗೆ ಪೇಜಾವರ ಶ್ರೀಗಳು ಸುರಕ್ಷಿತವಾಗಿದ್ದಾರೆ.
ತಕ್ಕಡಿ ಕುಸಿದು ಬೀಳುತ್ತಿದ್ದಂತ ಭಕ್ತರು ಆತಂಕಗೊಂಡಿದ್ದು, ಕೈಸನ್ನೆ ಮೂಲಕ ತಮಗೆ ಏನು ಆಗಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ. ಇನ್ನು ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆ ತುಲಾಭಾರ ನಡೆಸಲಾಗುತ್ತಿತ್ತು. ಶ‍್ರೀಗಳಿಗೆ 60 ತುಂಬಿದ ಹಿನ್ನೆಲೆ ಪ್ರಸನ್ನಾಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.