March 11, 2026
WhatsApp Image 2023-11-06 at 4.18.14 PM

ಸುಳ್ಯ: ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸುಳ್ಯ ತಾಲೂಕಿನ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ಸಂಭವಿಸಿದೆ.

ಪಂಜದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್‌ ಅವರ ಪುತ್ರ ಬಿಪಿನ್‌ ನೀರುಪಾಲಾದ ಯುವಕ.

ಬಿಪಿನ್‌ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶನಿವಾರ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು, ಬಳಿಕ ಅಲ್ಲಿನ ಬೀಚ್‌ಗೆ ತೆರಳಿದ್ದ ವೇಳೆ ಸಮುದ್ರಪಾಲಾಗಿದ್ದಾರೆ.

ರವಿವಾರ ಯುವಕನ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

About The Author

Leave a Reply