ಉಡುಪಿ: ಒಂದೇ ಕುಟುಂಬದ ನಾಲ್ವರು ಹತ್ಯೆಗೀಡಾದ ಘಟನೆ ಉಡುಪಿ ಮಲ್ಪೆಯಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ರಿಕ್ಷಾದಲ್ಲಿ ಬಂದಿದ್ದ ಎನ್ನಲಾಗಿದೆ.
ಈ ಬಗ್ಗೆ ರಿಕ್ಷಾ ಚಾಲಕ ಶ್ಯಾಮ್ ನೀಡಿದ ಮಾಹಿತಿ ಮೇರೆಗೆ, ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ. ರಿಕ್ಷಾ ಚಾಲಕನಿಗೆ ದಾರಿ ತಪ್ಪಿದಾಗ ಆರೋಪಿಯೇ ಸ್ವತಃ ಮನೆಯ ಗುರುತು ಹೇಳಿದ್ದ. ಸುಮಾರು 45ರ ಆಸುಪಾಸಿನ ವಯಸ್ಸಿನ ಹಂತಕ, ಬ್ರೌನ್ ಕಲರ್ ಅಂಗಿ ಧರಿಸಿದ್ದು ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ.ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ.ಗಡಿಬಿಡಿಯಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ರಿಕ್ಷಾ ಸ್ಟಾಂಡ್ ತಲುಪಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಆರೋಪಿ ಬೆಂಗಳೂರು ಕನ್ನಡ ಮಾತನಾಡುತ್ತಿದ್ದು, ಮನೆಯವರ ಪರಿಚಯದವನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಕೊಲೆಗೀಡಾದ ಅಫ್ನಾನ್ ಬೆಂಗಳೂರು ಏರ್ ಇಂಡಿಯಾದಲ್ಲಿ ಕೆಲಸ ಮಾಡ್ತಾ ಇದ್ದರು. ಕಳೆದ ರಾತ್ರಿ ರಜೆಯಲ್ಲಿ ಅಫ್ನಾನ್ಉಡುಪಿಗೆ ಬಂದಿದ್ದರು. ಒಬ್ಬರ ಮೇಲಿನ ದ್ವೇ಼ಷದಿಂದ ನಾಲ್ವರ ಹತ್ಯೆ ಮಾಡಿದ್ದಾನ ಅನ್ನುವ ಅನುಮಾನ ಇದೀಗ ಕಾಡತೊಡಗಿದೆ. ಇನ್ನುಳಿದಂತೆ ಅಯ್ನಾಸ್ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ. ಅಸಿಂ ಉಡುಪಿಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ. ಮಹಿಳೆ ಗೃಹಿಣಿಯಾಗಿದ್ದು, ಪತಿ ದೂರದ ಸೌದಿಯಲ್ಲಿ ಉದ್ಯೋಗದಲ್ಲಿದ್ದಾರೆ.