ಮಂಗಳೂರು:“ಕಾಂಗ್ರೆಸ್ ನಲ್ಲಿ ಆಚಾರ ವಿಚಾರವಿದೆ ಪ್ರಚಾರವಿಲ್ಲ, ಪ್ರಚಾರ ಮೋದಿಯಿಂದ ಕಲೀಬೇಕು”-ಪ್ರಿಯಾಂಕ್ ಖರ್ಗೆ ಲೇವಡಿ

ಮಂಗಳೂರು: ಕಾಂಗ್ರೆಸ್ ನಲ್ಲಿ ಆಚಾರವಿದೆ ವಿಚಾರವಿದೆ. ಆದರೆ, ಪ್ರಚಾರವಿಲ್ಲ. ಆ ಪ್ರಚಾರವನ್ನು ನಾವು ಮೋದಿಯವರಿಂದ ಕಲಿಯಬೇಕು ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಮಂಗಳೂರಿನ ಪುರಭವನದಲ್ಲಿ ನಡೆದ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಲಜೀವನ್ ಮಿಷನ್ ನಲ್ಲಿ 50% ಕೇಂದ್ರದ ಪಾಲು, 50% ಕಾಂಗ್ರೆಸ್ ಪಾಲು. ಇನ್ನುಳಿದ ಕೆಲಸಗಳಿಗೆ 10% ಮತ್ತೆ ಹಾಕಬೇಕಾಗುತ್ತದೆ. ಅವರು 40% ದುಡ್ಡು ಕೊಡಲು ಮೋದಿಯವರು 100% ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಬರ್ಬನ್ ರೈಲಿಗೆ 60% ರಾಜ್ಯ ಸಾಲ ಮಾಡಿದೆ. 20% ಅಫ್ರೇಡ್ ಕೊಡುತ್ತಿದೆ. ಇನ್ನುಳಿದ 20% ಕೇಂದ್ರದ್ದು. ಆದರೆ, ಈ 20%ಗೆ 100% ಪ್ರಚಾರ ಮೋದಿದ್ದು. ಕೇಂದ್ರದ ಯಾವುದೇ ಯೋಜನೆ ತೆಗೆದುಕೊಂಡರೂ ಅದರಲ್ಲಿ 50% ಪಾಲು ರಾಜ್ಯದ್ದು ಇರುತ್ತದೆ. ಕೇಂದ್ರ ಪುಗ್ಸಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುವ ಎಲ್ಲಾ ಯೋಜನೆಗಳಲ್ಲೂ ಕನ್ನಡಿಗರ ಪಾಲಿದೆ. ದುಡಿಯಲಾರದೆ ಅವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ದುಡಿದು ನಾವು ಪ್ರಚಾರ ತೆಗೆದುಕೊಳ್ಳುತ್ತಿಲ್ಲ ಎಂದರು. ಉದ್ಯೋಗ ಖಾತ್ರಿ ಯೋಜನೆಯಷ್ಟು ವ್ಯರ್ಥ ಯೋಜನೆಯಿಲ್ಲ ಎಂದು ಮೋದಿಯವರು ಅಂದಿದ್ದರು. ಕೊರೊನಾ ಸಂದರ್ಭ ಇದೇ ಯೋಜನೆ ಪ್ರಯೋಜನಕ್ಕೆ ಬಂದಿದ್ದು. ಉದ್ಯೋಗ ಖಾತ್ರಿ ಯೋಜನೆಯ 100 ಮಾನವ ದಿನವನ್ನು 150 ಮಾನವ ದಿನ ಕೊಡಿ ಎಂದು ಕೇಂದ್ರದ ಬಳಿಗೆ ಮೂರು ಬಾರಿ ಹೋದರೂ ಯಾವುದೇ ಸ್ಪಂದನೆ ಕೊಡುತ್ತಿಲ್ಲ. ಪಂಚಾಯತ್ ಸದಸ್ಯರಿಗೆ ಇನ್ನೂ ವೇಜಸ್ ಬಂದಿಲ್ಲ. 720 ಕೋಟಿ ರೂ. ಬಾಕಿ ಉಳಿಸಲಾಗಿದೆ‌. ನಾಲ್ಕು ಗ್ಯಾರಂಟಿಗಳನ್ನು ಸುಸೂತ್ರವಾಗಿ ಮಾಡಿ ಪೂರೈಸಿದ್ದೇವೆ. ನಾವು ಗ್ಯಾರಂಟಿ ಕೊಟ್ರೆ ರಾಜ್ಯದ ಬೊಕ್ಕಸ ಬರಿದು ಎಂದು ಹೇಳುತ್ತಾರೆ‌‌. ಅದೇ ಕೇಂದ್ರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಂದರೆ ಉತ್ತಮ ಯೋಜನೆ‌. ಆದರೆ, ಎಲ್ಲಾ ಗ್ಯಾರಂಟಿಗೂ ನೋಂದಣಿ ಮೊದಲು ಮಾಡೋದು ಮಾತ್ರ ಬಿಜೆಪಿಯವರೇ ಎಂದು ಪ್ರಿಯಾಂಕ್ ಖರ್ಗೆ ಹರಿಹಾಯ್ದರು‌.

Leave a Reply