Visitors have accessed this post 223 times.
ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವತಿಯಿಂದ ಮಕ್ಕಳ ದಿನಾಚರಣೆಯನ್ನು ಲಾಯಿಲ ದಯಾ ವಿಶೇಷ ಚೇತನ ಶಾಲೆಯ ಮಕ್ಕಳೊಂದಿಗೆ ವಿಶೇಷ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು.
ವಿಶೇಷ ಚೇತನ ಮಕ್ಕಳಿಗೆ ಸಿಹಿತಿಂಡಿ, ಆಟಿಕೆಗಳು ಆಹಾರ ಕಿಟ್ ನ್ನು ನೀಡಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆದು ವಿಶಿಷ್ಟ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ದಯಾ ವಿಶೇಷ ಶಾಲೆಯ ನಿರ್ದೇಶಕ ಫಾ.ವಿನೋದ್, ಮುಖ್ಯ ಶಿಕ್ಷಕಿಯಾದ ಶ್ರೀಮತಿ ದಿವ್ಯಾ ಹಾಗೂ ದಯಾ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷೆ ಶಮಾ ಆಲಿ ಉಜಿರೆ, ಉಪಾಧ್ಯಕ್ಷರಾದ ತಸ್ಲೀಮಾ ನವಾಝ್, ಕಾರ್ಯದರ್ಶಿ ಅಝ್ವಿನಾ ರಹೀಂ, ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ, ಸಮಿತಿ ಸದಸ್ಯರಾದ ಅಡ್ವೋಕೇಟ್ ಅಸ್ಮಾ, ಸೌದಾ ಬಶೀರ್, ಮಿಸ್ರಿಯಾ, ಜೈನಾಬ್ ಉಸ್ಮಾನ್ ಭಾಗವಹಿಸಿದ್ದರು