Visitors have accessed this post 214 times.
ನೆಲ್ಯಾಡಿ: ಸ್ನಾನಕ್ಕೆ ಹೋಗಿದ್ದ ಯುವಕನೋರ್ವ ನೀರುಪಾಲಾದ ಘಟನೆ ಗುಂಡ್ಯ ಹೊಳೆಯಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ (34ವ.) ಮೃತಪಟ್ಟವರು. ನ.14ರಂದು ಸಂಜೆ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆ ಕಾಲು ಜಾರಿ ನೀರು ಪಾಲಾಗಿ ಕಣ್ಮರೆಯಾಗಿದ್ದರು. ಮೃತದೇಹ ನ.15 ರಂದು ಮಧ್ಯಾಹ್ನ ಪತ್ತೆಯಾಗಿದೆ. ಅಗ್ನಿಶಾಮಕ ಹಾಗೂ ಶೌರ್ಯ ವಿಪತ್ತು ತಂಡದವರು ಮೃತ ದೇಹ ಪತ್ತೆ ಹಚ್ಚಿದ್ದಾರೆ.