November 8, 2025
WhatsApp Image 2023-11-19 at 11.56.57 AM

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಸುಣ್ಣದಕೆರೆ – ಶಕ್ತಿನಗರ ಸಂಪರ್ಕ ರಸ್ತೆಯು ತೀವ್ರ ಹದೆಗಟ್ಟಿದ್ದು, ದುರಂತವೆಂದರೆ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಈ ರಸ್ತೆ ಮರು ಡಾಮರೀಕರಣ ಆಗಲೇ ಇಲ್ಲ, ಇದರ ಬಗ್ಗೆ ಎಸ್‌ಡಿಪಿಐ ಬೆಂಬಲಿತ ಸುಣ್ಣದಕೆರೆ ವಾರ್ಡ್ ನ ಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಮುಸ್ತಫ ಜಿ ಕೆ, ಸಮೀರ್ ಎಸ್ ಕೆ, ಮೈಮುನ ಮೊಹಮ್ಮದಾಲಿರವರು ಬೆಳ್ತಂಗಡಿ ತಾಲೂಕು ಕಾರ್ಯ ನಿರ್ವಹಣಾ ಅಧಿಕಾರಿ ಹಾಗೂ ಬೆಳ್ತಂಗಡಿ ಉಪ ತಹಶಿಲ್ದಾರರಿಗೆ ಮನವಿ ಸಲ್ಲಿಸಿ ತಾವು ತಮ್ಮ ಮೇಲಧಿಕಾರಿ ಹಾಗೂ ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ ಈ ರಸ್ತೆ ದುರಸ್ಥಿ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ಅಕ್ಬರ್ ಬೆಳ್ತಂಗಡಿ, ಸ್ವಾಲಿ ಮದ್ದಡ್ಕ ಉಪಸ್ಥಿತರಿದ್ದರು.

About The Author

Leave a Reply