Visitors have accessed this post 182 times.
ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಬಿಯರ್ ಬಾಟಲ್ಗಳಿಂದ ಹಲ್ಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಮಣಿಕಂಠ ಅವರ ವಾಹನ ತಡೆದು ಬಿಯರ್ ಬಾಟಲ್ಗಳಿಂದ ತಲೆಗೆ ಹೊಡೆದು ಹಲ್ಲೆಕೋರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.
ಈ ನಡುವೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಕೆಲವು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ. ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ಆರೋಪಿ ಕಿರಣ್ ಹೇಳಿದ್ದು, ಈ ನಡುವೆ ಪ್ರತಿಮಾ ಅವರನ್ನು ಕೊಲೆ ಮಾಡಿ, ಬಳಿಕ ಮನೆಯಲ್ಲಿದ್ದ ಚಿನ್ನಾಭರಣ, ಹಣ ಕದ್ದು ಪರಾರಿಯಾಗಿದ್ದನು. 5 ಲಕ್ಷ ರೂ. ನಗದು, 3 ರಿಂದ 4 ಲಕ್ಷ ಮೌಲ್ಯದ 2 ಚಿನ್ನದ ಬಳೆ, ಬ್ರೇಸ್ ಲೇಟ್ ಆರೋಪಿ ಕಿರಣ್ ಕದಿದ್ದಾನೆ ಎನ್ನಲಾಗಿದೆ. ಅವುಗಳನ್ನು ಕದ್ದ ಬಳಿಕ ಆರೋಪಿ ಕಿರಣ್ ಕೋಣನಕುಂಟೆ ಬಳಿಯ ಗೆಳಯ ಶಿವು ನಿವಾಸದಲ್ಲಿ ಇಟ್ಟಿದ್ದನಾಂತೆ.