ಹಾಡಹಗಲೇ ಎಲ್ಲರೆದುರಲ್ಲೇ ಯುವತಿ ಕಿಡ್ನ್ಯಾಪ್.‌ ಸಂತ್ರಸ್ತೆ ಲಾಡ್ಜ್‌ನಲ್ಲಿ ಪತ್ತೆ

ಸೋಮವಾರ ಅಪಹರಣಕ್ಕೊಳಗಾಗಿದ್ದ ಮಧ್ಯಪ್ರದೇಶದ ದಾತಿಯಾ ಕಾಲೇಜು ವಿದ್ಯಾರ್ಥಿ ಲಾಡ್ಜ್‌ನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗ್ವಾಲಿಯರ್‌ನ ಹಿರಿಯ ಪೊಲೀಸ್ ಅಧೀಕ್ಷಕ ರಾಜೇಶ್ ಸಿಂಗ್ ಚಂದೇಲ್ ಪ್ರಕಾರ, ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಲಹರ್‌ನಿಂದ ಹಿಡಿಯಲಾಗಿದೆ.

“ನಿನ್ನೆ ಗ್ವಾಲಿಯರ್‌ನ ನಾಕಾ ಚಂದ್ರವದ್ನಿ ಪೆಟ್ರೋಲ್ ಬಂಕ್ ಬಳಿ ಅಪಹರಣಕ್ಕೊಳಗಾಗಿದ್ದ 19 ವರ್ಷದ ಯುವತಿ ಗುಣಾದಲ್ಲಿನ ಲಾಡ್ಜ್‌ನಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಮೋಟರ್‌ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಲಾಹರ್‌ನಿಂದ ಬಂಧಿಸಲಾಗಿದೆ” ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸೋಮವಾರ ಬೆಳಗ್ಗೆ ಗ್ವಾಲಿಯರ್‌ನ ಝಾನ್ಸಿ ರಸ್ತೆ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬಸ್‌ನಿಂದ ಇಳಿಯುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಯುವತಿಯನ್ನು ಅಪಹರಿಸಿದ್ದಾರೆ.

ಜಿಲ್ಲೆಯ ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ಪೆಟ್ರೋಲ್ ಪಂಪ್ ಬಳಿ ಸೋಮವಾರ ಬೆಳಗ್ಗೆ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಆಕೆಯನ್ನು ಬೈಕ್ ಮೇಲೆ ಕೂರಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

Leave a Reply