November 8, 2025
WhatsApp Image 2023-12-09 at 6.29.33 AM

ಮಂಗಳೂರು : ಸೋನಿ ಟಿವಿಯಲ್ಲಿ ನಡೆಯುತ್ತಿರುವ ರಿಯಾಲಿಟಿ ಶೋ ಮಾಸ್ಟರ್ ಚೆಫ್ ಇಂಡಿಯಾ ಟ್ಯಾಲೆಂಟ್ ನಲ್ಲಿ ಮಂಗಳೂರಿನ 24 ವರ್ಷದ ಯುವಕ ಮೊಹಮ್ಮದ್ ಆಶಿಕ್ ಗೆದ್ದು ಬೀಗಿದ್ದಾರೆ. ಅಕ್ಟೋಬ‌ರ್ 16ರಿಂದ ನಡೆಯುತ್ತಿದ್ದ ರಿಯಾಲಿಟಿ ಶೋನಲ್ಲಿ ಇಡಿ ದೇಶದ ವಿಭಿನ್ನ ಮಾದರಿಯ ದೇಸಿ ಅಡುಗೆಗಳ ಮಾದರಿಗಳನ್ನು ತೋರಿಸುವುದು ಸವಾಲಾಗಿತ್ತು. ನಿಗದಿತ ಸಮಯದೊಳಗೆ ಅಡುಗೆಗಳನ್ನು ಸಿದ್ಧಪಡಿಸಿ ತೋರಿಸಬೇಕಿತ್ತು. ಮಾಸ್ಟರ್ ಚೆಫ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಯುವಕನೋರ್ವ ವಿನ್ನರ್ ಆಗಿ ಹೊರಹೊಮ್ಮಿದ್ದಾನೆ. ಈ ಮೂಲಕ ಮಂಗಳೂರಿನ ಮೊಹಮ್ಮದ್ ಆಶಿಕ್ ಅಪರೂಪದ ದಾಖಲೆಯನ್ನು ಸೃಷ್ಟಿಸಿ ಇಡಿ ದೇಶದ ಗಮನವನ್ನು ಸೆಳೆದಿದ್ದಾರೆ. ಮೊಹಮ್ಮದ್ ಆಶಿಕ್ ಗೆ ಆರಂಭದಲ್ಲಿ ಹೊಟೇಲ್ ಮ್ಯಾನೇಜೆಂಟ್‌ನಲ್ಲಿ ಗುರುತರ ಸಾಧನೆ ಮಾಡಲು ಹಣಕಾಸು ತೊಂದರೆ ಎದುರಾಗಿತ್ತು. ಆದರೆ, ಅಷ್ಟಕ್ಕೇ ಹಿಮ್ಮೆಟ್ಟದ ಆಶಿಕ್ ತಮ್ಮದೇ ಆದ ವಿಶೇಷ ರೆಸಿಪಿಯುಳ್ಳ ಕುಲ್ಕಿ ಹಬ್ ಎನ್ನುವ ಜ್ಯೂಸ್ ಶಾಪ್ ಅನ್ನು ಮಂಗಳೂರಿನಲ್ಲಿ ಆರಂಭಿಸಿದ್ದರು. ಸೋನಿ ಟಿವಿಯಲ್ಲಿ ಈ ಹಿಂದೆ ನಡೆದಿದ್ದ ರಿಯಾಲಿಟಿ ಶೋನಲ್ಲಿ ಮೊಹಮ್ಮದ್ ಆಶಿಕ್ ಸ್ಪರ್ಧಿಸಿದ್ದರು. ಆದರೆ, ಜಯದ ಹಾರವನ್ನು ಕೊರಳಿಗೆ ಹಾಕಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ಗುರುತರ ಸಾಧನೆ ಮಾಡಿದ್ದಲ್ಲದೆ, ಮಾಸ್ಟರ್ ಚೆಫ್ ಕಿರೀಟವನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಮೂಲಕ ಮೊಹಮ್ಮದ್ ಆಶಿಕ್ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

About The Author

Leave a Reply