Visitors have accessed this post 1073 times.

ಸುಳ್ಯ: ಅಚ್ಚರಿಯ ಘಟನೆ – ಗಾಳಿಯಲ್ಲಿ ತೇಲಿದ ಜಲ್ಲಿಕಲ್ಲು

Visitors have accessed this post 1073 times.

ಸುಳ್ಯ ತಾಲೂಕಿನ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ  ತಂಟೆಪ್ಪಾಡಿಯ ಪುಟ್ಟಣ್ಣ ಗೌಡ ಎಂಬವರ ಮಗಳು ಧನುಶ್ರೀ ಕಳೆದ ಶುಕ್ರವಾರ ಎಂದಿನಂತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಾಲೇಜಿಗೆ ತೆರಳಲು ಮನೆಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಚ್ಚರಿಯ ದೃಶ್ಯವೊಂದು ಕಂಡಿದೆ. ರಸ್ತೆಯಲ್ಲಿದ್ದ ಜಲ್ಲಿಕಲ್ಲೊಂದು ಗಾಳಿಯಲ್ಲಿ ತೇಲಾಡುತ್ತಿರುವುದು ಕಂಡಿದೆ. ಈ ವಿಸ್ಮಯದ ದೃಶ್ಯ ನೋಡಿದ ಆಕೆ ಕೂಡಲೇ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ಈ ಜಲ್ಲಿ ಕಲ್ಲು ಕೆಲವು ಸೆಕೆಂಡ್ ಗಳ ಕಾಲ ಗಾಳಿಯಲ್ಲಿ ತೇಲಾಡಿದೆ ಎಂದು ಹೇಳಲಾಗಿದೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *