January 7, 2026
WhatsApp Image 2023-12-14 at 8.15.06 AM

ಉಳ್ಳಾಲ: ಯುವಕನೋರ್ವನನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತಕಾಲನಿ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ  ಸಂಭವಿಸಿದೆ.

ಸಾರಸ್ವತಕಾಲನಿ ನಿವಾಸಿ ವರುಣ್ (28) ಹತ್ಯೆಯಾದವರು. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ  ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ  ಐದು ಮಂದಿಯ ನಡುವೆ ವಾಗ್ವಾದ ನಡೆದು ಸೂರಜ್ , ವರುಣ್ ಹೃದಯಭಾಗಕ್ಕೆ ಚೂರಿಯಿಂದ ತಿವಿದು ಹತ್ಯೆ ನಡೆಸಿದ್ದಾನೆ. ಹಳೇ ವೈಷಮ್ಯದಿಂದ ಕೃತ್ಯ ನಡೆದಿರುವ ಸಾಧ್ಯತೆಗಳಿದ್ದು, ಸೋಮೇಶ್ವರ ಪುರಸಭೆಗೆ ಡಿ. 27 ಕ್ಕೆ ಚುನಾವಣೆಯೂ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೆಲವೇ ದಿನಗಳು ಬಾಕಿಯಿದೆ. ಈ ಸಂಬಂಧವೂ ಗಲಾಟೆ ನಡೆದಿರುವ ಸಾಧ್ಯತೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ರವಿರಾಜ್ ಎಂಬವರಿಗೂ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

About The Author

Leave a Reply