ಮಂಗಳೂರು: ಖೋಟಾನೋಟು ಚಲಾವಣೆಗೆ ಯತ್ನಿಸುತ್ತಿದ್ದ ಆರೋಪಿ ಸಿಸಿಬಿ ಬಲೆಗೆ

ಮಂಗಳೂರು: ನಗರದ ಕಂಕನಾಡಿಯಲ್ಲಿ ಖೋಟಾ ನೋಟಿನ ಚಲಾವಣೆಗೆ ಯತ್ನಿಸುತ್ತಿದ್ದ ಓರ್ವ ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಕೇರಳ ರಾಜ್ಯದ ಮಂಜೆಶ್ವರದ ಕೀರ್ತೆಶ್ವರ ಬಳಿಯ ಪ್ರಶ್ವಿತ್(25) ಬಂಧಿತ ಆರೋಪಿ. ನಗರದ ಕಂಕನಾಡಿ ಬಳಿಯಲ್ಲಿ ಪ್ರಶ್ವಿತ್ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ 500 ರೂ. ಮುಖಬೆಲೆಯ, 200 ರೂ. ಮುಖಬೆಲೆಯ ಮತ್ತು 100 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಚಲಾವಣೆಗೆ ಯತ್ನಿಸುತ್ತಿದ್ದಾನೆ. ಆರೋಪಿ ಈವರೆಗೆ ಸುಮಾರು 8 ರಿಂದ 9 ಸಾವಿರ ರೂ.‌ ಮೊತ್ತದ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದಾನೆ. ಆರೋಪಿಯಿಂದ ನಕಲಿ ನೋಟುಗಳಾದ 500 ರೂ. ಮುಖಬೆಲೆಯ 3 ನೋಟುಗಳು, 200 ರೂ. ಮುಖಬೆಲೆಯ 2 ನೋಟುಗಳು ಹಾಗೂ 100 ರೂ. ಮುಖಬೆಲೆಯ 3 ನೋಟುಗಳು ಹಾಗೂ ಮೊಬೈಲ್ ಫೋನ್ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯಿಂದ 2,220 ರೂ. ಮೊತ್ತದ 8 ಖೋಟಾ ನೋಟುಗಳು, ಒಂದು ಮೊಬೈಲ್, 4,250 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply