Visitors have accessed this post 1199 times.

ನಾಪತ್ತೆ ಆಗಿದ್ದ ಗಂಡ ಬಿಗ್​​ಬಾಸ್​​​ ಕಾರ್ಯಕ್ರಮದಲ್ಲಿ ಹೆಣ್ಣಾಗಿ ಪತ್ತೆ..! ಕುಟುಂಬಸ್ಥರು ಶಾಕ್

Visitors have accessed this post 1199 times.

ರಾಮನಗರ: ಹೆಂಡತಿ ಮಕ್ಕಳಿದ್ದರೂ ಸಹ ಮನೆ ಕುಟುಂಬ ಹೆಂಡತಿ ಮಕ್ಕಳನ್ನು ತೊರೆದು ವ್ಯಕ್ತಿ ಒಬ್ಬ ತೃತೀಯಲಿಂಗಿಯಾಗಿ ಬದಲಾಗಿರುವ ವಿಚಿತ್ರ ಘಟನೆ ರಾಮನಗರ ಜಿಲ್ಲೆಯ ಬಡಾವಣೆಯ ಒಂದರಲ್ಲಿ ನಡೆದಿದೆ.

ಆರು ವರ್ಷಗಳ ಹಿಂದೆ ಹೆಂಡತಿ ಮಕ್ಕಳನ್ನು ಬಿಟ್ಟು ಕಾಣೆಯಾಗಿದ್ದ ವ್ಯಕ್ತಿಯೊಬ್ಬ ತೃತೀಯ ಲಿಂಗಿಯಾಗಿ ಪತ್ತೆಯಾಗಿದ್ದಾನೆ. ನಗರದ ಬಡಾವಣೆಯ ನಿವಾಸಿಯಾಗಿದ್ದ ಲಕ್ಷ್ಮಣ್ ರಾವ್ 2017 ಮಾರ್ಚ್ ತಿಂಗಳಲ್ಲಿ ಮನೆ ಬಿಟ್ಟು ಹೋಗಿದ್ದರು. ಸಾಲ ಮಾಡಿಕೊಂಡು ಹೋಗಿರಬಹುದು ಎಂದು ಭಾವಿಸಿದ್ದ ಮನೆಯವರು, ಎಲ್ಲಾ ಕಡೆ ಹುಡುಕಿದರು. ಎಲ್ಲಿಯೂ ಸಿಗದೇ ಇದ್ದಾಗ ಲಕ್ಷ್ಮಣ್‌ ರಾವ್ ಅವರ ಪತ್ನಿ ಐಜೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದರು. ಟಿ.ವಿ ವಾಹಿನಿಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದ್ದ ತೃತೀಯ ಲಿಂಗಿ ನೀತೂ ಅವರಿಗೆ ಇತ್ತೀಚೆಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು.

ಇದನ್ನು ರಶ್ಮಿಕಾ ರೀಲ್ಸ್ ಮಾಡಿದ್ದು, ಅದರಲ್ಲಿ ಲಕ್ಷ್ಮಣ್ ರಾವ್ ಹೆಣ್ಣಾಗಿ ಕಾಣಿಸಿಕೊಂಡಿದ್ದ ಇದನ್ನು ವೀಕ್ಷಿಸಿದ ಲಕ್ಷ್ಮಣ್ ಕುಟುಂಬದವರು ಪೊಲೀಸರಿಗೆ ಸುದ್ದಿಮುಟ್ಟಿಸಿದರು. ಪೊಲೀಸರು ರಶ್ಮಿಕಾ ಅವರನ್ನು ಭೇಟಿ ಮಾಡಿದಾಗ, ಆಕೆ ವಿಜಯಲಕ್ಷ್ಮಿ ಎಂದು ವಿಳಾಸವನ್ನೂ ನೀಡಿದರು. ರಶ್ಮಿಕಾ ನೀಡಿದ ವಿಳಾಸಕ್ಕೆ ತೆರಳಿದ್ದ ರಾಮನಗರ ಪೊಲೀಸರಿಗೆ ಶಾಕ್ ಕಾದಿತ್ತು. ಪೊಲೀಸರ ಬಳಿ ಇದ್ದ ಲಕ್ಷ್ಮಣ್ ರಾವ್ ಫೋಟೊಗೂ ಎದುರಿಗಿದ್ದ ಹೆಣ್ಣಿಗೂ ಅಜಾಗಜಾಂತರ ವ್ಯತ್ಯಾಸವಿತ್ತು. ಆದರೆ ಮುಖದಲ್ಲಿ ಮಾತ್ರ ಹೋಲಿಕೆ ಇತ್ತು.

ಈ ಬಗ್ಗೆ ಪ್ರಶ್ನಿಸಿದಾಗ ತಾನು ಲಕ್ಷ್ಮಣ್ ಅಲ್ಲ ವಿಜಯಲಕ್ಷ್ಮಿ ಎಂದು ವಾದಿಸಿದ್ದರಿಂದ ಪೊಲೀಸರಿಗೆ ಪ್ರಕರಣ ಸವಾಲಾಯಿತು. ಕುಟುಂಬದವರಿಗೂ ಇದೇ ಉತ್ತರ ಬಂತು. ಕಡೆಗೆ ಪೊಲೀಸರು, ವಾಪಸ್ ಹೋಗುವಾಗ ಲಕ್ಷ್ಮಣ್ ಎಂದು ಕರೆದಾಗ, ವಿಜಯಲಕ್ಷ್ಮಿ ತಿರುಗಿದ್ದಾಳೆ. ಇದರಿಂದ ಅನುಮಾನಗೊಂಡ ಪೊಲೀಸರು ಆಕೆಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ಲಕ್ಷ್ಮಣನೇ ವಿಜಯಲಕ್ಷ್ಮಿಯಾಗಿ ಬದಲಾವಣೆಯಾಗಿರುವ ಸಂಗತಿ ಗೊತ್ತಾಗಿದೆ.

ಆದರೆ, ವಿಜಯಲಕ್ಷ್ಮೀ ವಾಪಸ್ ಮನೆಗೆ ಹೋಗಲು ನಿರಾಕರಿಸಿದ್ದು, ಹೆಂಡತಿ ಮಕ್ಕಳು ಬೇಡ ಎಂದಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ನಾಪತ್ತೆ ಪ್ರಕರಣವನ್ನು ಇತ್ಯರ್ಥಪಡಿಸಿದರು. ಆದರೆ, 2015 ರಲ್ಲಿ ಮದುವೆಯಾಗಿದ್ದ ಲಕ್ಷ್ಮಣ್‌ ರಾವ್‌ನ ಪತ್ನಿಗೆ ಎರಡು ಮಕ್ಕಳಿದ್ದಾರೆ

Leave a Reply

Your email address will not be published. Required fields are marked *