Visitors have accessed this post 1554 times.
ಕುಂದಾಪುರ: ಕುಂದಾಪುರ ಸಮೀಪದ ವಂಡ್ಸೆ ಎಂಬಲ್ಲಿ ವಾಸ್ತವ್ಯವಿರುವ ಅಬ್ದಲ್ ರೆಹಮಾನ್ ಎಂಬಾತನ ಪತ್ನಿ ಆಪ್ಸಾನಾ (23) ಜನವರಿ 30ರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಜನವರಿ 30ರಂದು ರಾತ್ರಿ 11 ಗಂಟೆಗೆ ಮನೆಯ ರೂಮಿನಲ್ಲಿ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡುವಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೆ ಮದುವೆಯಾಗಿದ್ದ ಅಪ್ಸಾನಾಳಿಗೆ ಸಾಮಾಜಿಕ ಜಾಲತಾಣದ ಚಟವಿತ್ತು ಎನ್ನಲಾಗಿದೆ. ಬಹುತೇಕ ಸಮಯವನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಿದ್ದ ಅಫ್ಸಾನಾ ಹೆಚ್ಚಾಗಿ ಇನ್‌ಸ್ಟಾಟಾಗ್ರಾಂ ಬಳಸುತ್ತಿದ್ದಳು ಎನ್ನಲಾಗಿದೆ. ಅಫ್ಸಾನ ಪತಿ ಅಬ್ದುಲ್ ರೆಹಮಾನ್ ಗೋವಾದಲ್ಲಿ ಮೊಬೈಲ್ ಸರ್ವಿಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿಯನ್ನು ತನ್ನ ಮನೆಯಲ್ಲಿ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಅಪರಿಚಿತರಿಬ್ಬರು ಜನವರಿ 30ರಂದು ವಂಡ್ಸೆ ಪೇಟೆಯಲ್ಲಿ ರಾತ್ರಿ ಹೊತ್ತು ವಾಹನವೊಂದರಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದು ಅವರೇ ಕರೆದೊಯ್ದಿರಬಹುದು ಎಂದು ಶಂಕಿಸಲಾಗಿದೆ. ರೂಮಿನಲ್ಲಿ ನಾನು ತುಂಬಾ ದೂರು ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ ಎಂದು ಚೀಟಿ ಬರೆದಿಡಲಾಗಿತ್ತು ಎನ್ನಲಾಗಿದೆ. 5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು, ಬಲಗೈಯಲ್ಲಿ ಹಳೆಯ ಗಾಯದ ಗುರುತು ಇದೆ. ಉರ್ದು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.