‘ನಾನು ಜೀವಂತ’ವಾಗಿದ್ದೇನೆ- ‘ನಟಿ ಪೂನಂ ಪಾಂಡೆ

ಬಾಲಿವುಡ್‌ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅವರ ಅಭಿಮಾನಿಗಳ ಶಾಕ್ ಕೊಟ್ಟಿದ್ದಂತೂ ನಿಜ. ಆದರೆ ನಟಿಯ ಸತ್ತಿಲ್ಲ, ಬದುಕಿದ್ದಾಳೆ. ಹೌದು. ಈ ವಿಚಾರವನ್ನು ಸ್ವತಃ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. ತಾನು ಅಭಿಮಾನಿಗಳಿ ಶಾಕ್ ಕೊಡಲು ಹೀಗೆ ಮಾಡಿದೆ ನನ್ನನ್ನು ಕ್ಷಮಿಸಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆ ಕೇಳಿದ್ದಾಳೆ. ವಿಡಿಯೋದಲ್ಲಿ ನಟಿ ಹೇಳಿದ್ದೇನು?: ‘ಕ್ಷಮಿಸಿ, ನನ್ನ ಸಾವಿನಿಂದ ಬೇಸರದಲ್ಲಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಹಾಗೆ ಮಾಡಿದ್ದು ನಿಮಗೆಲ್ಲರಿಗೂ ಶಾಕ್ ಕೊಡುವುದಕ್ಕೆ ಮಾತ್ರ. ನಾನು ನನ್ನ ಸಾವನ್ನು ನಾನು ಫೇಕ್ ಮಾಡಿದೆ. ನನ್ನ ಉದ್ದೇಶ ನಿಮ್ಮೆಲ್ಲರನ್ನು ಶಾಕ್ ಮಾಡುವುದು ಮಾತ್ರ. ಗಂಭೀರವಾಗಿರುವ ವಿಚಾರದ ಬಗ್ಗೆ ಎಲ್ಲರಿಗೂ ಶಾಕ್ ಕೊಡಲು ಹೀಗೆ ಮಾಡಿದೆ. ನಾವು ಸೈಲೆಂಟಾಗಿ ಜೀವ ತೆಗೆಯುವ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಸಾಕಷ್ಟು ಮಾತನಾಡುತ್ತಿಲ್ಲ ಅಲ್ಲವೇ? ಆದರೆ ನನ್ನ ಸಾವು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಿಮ್ಮನ್ನು ಚರ್ಚಿಸುವಂತೆ ಮಾಡಿದೆ’ ಎಂದು ಪೂನಂ ಪಾಂಡೆ ಹೇಳಿದ್ದಾರೆ. ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಾವು ಮಾತನಾಡಬೇಕಾಗಿದೆ. ಆದರೆ ಯಾರೂ ಇದರ ಬಗ್ಗೆ ಮಾತನಾಡುತ್ತಿರಲಿಲ್ಲ. ಈ ರೋಗಕ್ಕೆ ಅಟೆನ್ಶನ್ ಬೇಕಾಗಿತ್ತು. ಇದಕ್ಕೆ ಸ್ಪಾಟ್​ಲೈಟ್ ಬೇಕಾಗಿತ್ತು. ನನ್ನ ಸಾವಿಗೆ ಈ ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಯಿತು ಎನ್ನುವುದರಲ್ಲಿ ನನಗೆ ಖುಷಿ ಇದೆ. ಸರ್ವಿಕಲ್ ಕ್ಯಾನ್ಸರ್​ಗಾಗಿ ನಾನು ನನ್ನ ಸಾವನ್ನು ಫೇಕ್ ಮಾಡಿದೆ. ಇದು ಸೈಲೆಂಟ್ ಆಗಿ ನಮ್ಮ ಜೀವವನ್ನು ತೆಗೆಯುವ ಒಂದು ರೋಗ. ನನ್ನ ಸಾವಿನ ಸುದ್ದಿ ಮಾಡಿರುವ ಪರಿಣಾಮದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ನಟಿ ತಿಳಿಸಿದ್ದಾರೆ.

Leave a Reply