Visitors have accessed this post 663 times.
ಮಂಗಳೂರು: ಮಳಲಿ ಮಂದಿರ – ಮಸೀದಿ ವಿವಾದ ಪ್ರಕರಣದಲ್ಲಿ ವಕ್ಫ್ ಬೋರ್ಡ್ ಎಂಟ್ರಿಯಾಗಿದೆ. ಸದ್ಯ ನ್ಯಾಯಾಲಯದಲ್ಲಿ ವ್ಯಾಜ್ಯವನ್ನು ಮಸೀದಿಯ ಆಡಳಿತ ಮಂಡಳಿ ಸಮಿತಿಯೇ ಮುನ್ನಡೆಸುತ್ತಿತ್ತು.
ಇನ್ನು ಮುಂದೆ ವಕ್ಫ್ ಬೋರ್ಡ್ ಕೂಡಾ ಪ್ರತ್ಯಕ್ಷವಾಗಿ ಕೋರ್ಟ್ ನಲ್ಲಿ ನಡೆಸಲಿದೆ. ಆರ್ ಟಿಸಿ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಈಗಲೂ ಮಸೀದಿಯ ಹೆಸರೇ ಇದೆ. ಅಲ್ಲದೇ ಅಬ್ಬಕ್ಕನ ಕಾಲದಲ್ಲಿಯೇ ಇದು ಮಸೀದಿಯೆಂದೇ ಉಲ್ಲೇಖವಿದೆ ಎನ್ನುವುದನ್ನು ವಿದೇಶಿ ಪ್ರವಾಸಿಗ ‘ಪಿಯಾತ್ರೋ ದಲ್ಲಾವೆಲ್ಲೆ’ ವಿದೇಶಿ ಪ್ರವಾಸಿ ಕಂಡ ಅಬ್ಬಕ್ಕದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಈ ಬಗ್ಗೆ ವಕ್ಫ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಎ ನಾಸೀರ್ ಲಕ್ಕಿ ಸ್ಟಾರ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.