July 28, 2026
WhatsApp Image 2023-10-10 at 9.29.03 AM

ಮಂಗಳೂರು: ಬಸ್ ಹತ್ತುವ ಮೊದಲೇ ಬಸ್ ಚಲಾಯಿಸಿದಲ್ಲದೇ, ಅವಾಚ್ಯ ಶಬ್ದಗಳಿಂದ ಸಾರ್ವಜನಿಕರ ಮುಂದೆ ಬಸ್ ನಿರ್ವಾಹಕ ನಿಂದಿಸಿದ್ದಾನೆ ಎಂದು ವಕೀಲೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಪ್ರಕಾರ ವೃತ್ತಿಯಲ್ಲಿ ವಕೀಲೆಯಾಗಿರುವ ಮಹಿಳೆಯೊಬ್ಬರು ಪಿವಿಎಸ್ ಸರ್ಕಲ್ ಬಳಿ ಬೋಂದೆಲ್ ನಿಂದ ಸ್ಟೆಟ್ ಬ್ಯಾಂಕ್ ಗೆ ತೆರಳು ಆಶೆಲ್ ರೂಟ್ ನಂಬರ್ 19 ಬಸ್ ನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಬಸ್ ಡ್ರೈವರ್ ಎಕಾಏಕಿ ಬಸ್ ನ್ನು ಚಲಾಯಿಸಿದ್ದು, ಮಹಿಳೆ ರಸ್ತೆಗೆ ಬೀಳುವ ವೇಳೆ ಬಸ್ ನ ನಿರ್ವಾಹಕ ಮಹಿಳೆಯ ಕೈಯನ್ನು ಹಿಡಿದು ಏಳೆದು ಬಸ್ ನಲ್ಲಿದ್ದ ಸಾರ್ವಜನಿಕರ ಎದುರೇ ” ನೀವು ಮುಸ್ಲಿಂ ಹೆಂಗಸರಿಗೆ ತುಂಬಾ ಅಹಂಕಾರ ಬೇಕಾದರೆ ನಮ್ಮ ಬಸ್ಸಲ್ಲಿ ಬರಬೇಕು ಇಲ್ಲದಿದ್ದರೆ ಇಳಿಯಬೇಕು ಎಂದು ” ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಕುರಿತಂತೆ ವಕೀಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

About The Author

Leave a Reply